×
Ad

ಹಿಂದಿ ಪರಸ್ಪರ ಸಂಬಂಧ ಬೆಸೆಯುವ ಭಾಷೆ: ಡಾ.ಅಶೋಕ್

Update: 2017-09-26 19:40 IST

ಉಡುಪಿ, ಸೆ.26: ಹಿಂದಿಯು ಪರಸ್ಪರ ಸಂಬಂಧವನ್ನು ಬೆಸೆಯುವ ಭಾಷೆ ಯಾಗಿದೆ ಎಂದು ಕಾರ್ಕಳ ವೆಂಕಟರಮಣ ಮಹಿಳಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಅಶೋಕ್ ಡಿಸೋಜ ಹೇಳಿದ್ದಾರೆ.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಹಿಂದಿ ದಿವಸ ಆಚರಣೆಯಲ್ಲಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಮಾತನಾಡಿ, ಹಿಂದಿಯು ಸುಮಧುರ ಭಾಷೆ. ವಿದ್ಯಾರ್ಥಿಗಳು ಸಂಪರ್ಕ ಭಾಷೆ ಯಾಗಿ ಇದನ್ನು ಬಳಸಬೇಕು ಎಂದು ತಿಳಿಸಿದರು.

ಹಿಂದಿ ವಿಭಾಗ ನಡೆಸಿದ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಹಿಂದಿ ಪ್ರಬಂಧ ಸ್ಪರ್ಧೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಿಂದಿ ವಿಭಾಗದ ಮುಖ್ಯಸ್ಥೆ ಸೋಫಿಯಾ ಡಯಾಸ್ ಸ್ವಾತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಿಂದಿ ವಿಭಾಗದ ಅನುಪಮಾ ಜೋಗಿ ವಿಜೇತರ ಹೆಸರುಗಳನ್ನು ಓದಿದರು. ವಿದ್ಯಾರ್ಥಿನಿ ಸನಾ ವಂದಿಸಿದರು. ಶರಣ್ಯ ಶೆಟ್ಟಿ ಮತ್ತು ಆರಜೂ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನೃತ್ಯ, ಪ್ರಹಸನ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News