ಅಂಜಾರಿನಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಉದ್ಘಾಟನೆ
ಉಡುಪಿ, ಸೆ.26: ಯಕ್ಷಗಾನ ಕಲಿಕೆಯೆಂದರೆ ಕೇವಲ ಒಂದು ಕಲೆಯನ್ನು ಅಭ್ಯಸಿಸುವುದಷ್ಟೆ ಅಲ್ಲ, ಅದು ಒಂದು ಸಂಸ್ಕಾರದ ಕಲಿಕೆ ಎಂದು ಅಂಜಾರು ಮಠದ ಪುರೋಹಿತ ಸೀತಾರಾಮ ಆಚಾರ್ಯ ಹೇಳಿದ್ದಾರೆ.
ಮೂಡು ಅಂಜಾರಿನಲ್ಲಿ ಶ್ರೀದುರ್ಗಾಪರಮೇಶ್ವರಿ ಮರಾಟಿ ಸಮುದಾಯದ ಯಕ್ಷಗಾನ ಕಲಿಕಾ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿ ದ್ದರು. ಯಕ್ಷಗಾನವೆಂದರೆ ಸಂಸ್ಕಾರ ಬೌದ್ಧಿಕ ಅಧ್ಯಯನ ಹಾಗೂ ಶಾರೀರಿಕ ವ್ಯಾಯಾಮಗಳನ್ನೊಳಗೊಂಡ ಕಲೆ. ವಿದ್ಯಾರ್ಥಿ ದೆಸೆಯಲ್ಲಿಯೇ ಇದನ್ನು ಕಲಿ ಯುವುದರಿಂದ ವಿದ್ಯಾರ್ಥಿಗಳು ಪ್ರತಿಭಾವಂತರಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ತಲ್ಲೂರು ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಮರಾಟಿ ಸಂಘದ ಅಧ್ಯಕ್ಷ ಅನಂತ ನಾಯ್ಕಿ, ಯಕ್ಷಗಾನ ಗುರು ಗಣೇಶ್ ನಾಯ್ಕಿ ಚೇರ್ಕಾಡಿ, ಯಕ್ಷಗಾನ ಕೇಂದ್ರದ ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ, ಯಕ್ಷಗಾನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಸ್ವಾಗತಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ನಾಯ್ಕಾ ಮದಗ ವಂದಿಸಿದರು. ಇದಕ್ಕೂ ಮೊದಲು ಉಡುಪಿ ಜಿಲ್ಲಾ ಭಜನಾ ಒಕ್ಕೂಟದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಯಕ್ಷಗಾನ ಕೇಂದ್ರದ ಕಲಾವಿದರಿಂದಯಕ್ಷಗಾನ ಪ್ರದರ್ಶನ ನಡೆಯಿತು.