×
Ad

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಡಿವೈಎಫ್‌ಐನಿಂದ ವಿನೂತನ ಪ್ರತಿಭಟನೆ

Update: 2017-09-26 20:03 IST

ಮಂಗಳೂರು, ಸೆ. 26: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆ ಏರಿಕೆಯನ್ನು ವಿರೋಧಿಸಿ ಡಿವೈಎಫ್‌ಐ ಮಂಗಳೂರು ನಗರ ಸಮಿತಿ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ತಳ್ಳುಗಾಡಿಗೆ ದ್ವಿಚಕ್ರ ವಾಹನಗಳನ್ನು ಕಟ್ಟಿ ಎಳೆಯುವ ಮೂಲಕ ವಿನೂತ ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಳೆ ಇಳಿಕೆಯಾಗಿದ್ದರೂ ಕೇಂದ್ರ ಸರಕಾರ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್‌ನ ಮೇಲಿನ ದರವನ್ನು ಇಳಿಸಿಲ್ಲ. ತೈಲ ಬೆಲೆ ಪರಿಷ್ಕರಣೆಯ ನೆಪದಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ಪೆಟ್ರೋಲ್,ಡೀಸೆಲ್ ಮೇಲಿನ ಬೆಲೆಯಲ್ಲಿ ಏರಿಕೆ ಮಾಡುವ ಮೂಲಕ ಜನರನ್ನು ಮೋಸ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ತೈಲ ಬೆಲೆ ಏರಿಕೆಯಾದಾಗ ಬಿಜೆಪಿಯವರು ಬಂದ್ ಮತ್ತು ಮುಷ್ಕರ ನಡೆಸಿದ್ದವು. ಇದೀಗ ಇವರದ್ದೇ ಸರಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದು, ತೈಲ ಬೆಲೆ ಏರಿಕೆ ಮಾಡಿರುವ ಮೂಲಕ ವಾಹನ ಚಾಲಕರು, ಮಾಲಕರು ಮತ್ತು ಜನಸಾಮಾನ್ಯರಿಗೆ ಸಂಕಷ್ಟವನ್ನು ಒದಗಿಸಿದೆ ಎಂದು ಆರೋಪಿಸಿದರು.

ಡಿವೈಎಫ್‌ಐದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಸರಕಾರದವು ಜನರಿಗೆ ಕೊಟ್ಟ ವಾಗ್ದಾನವನ್ನು ಈಡೇರಿಸಿಲ್ಲ. ಮೂರು ವರ್ಷ ಕಳೆದರೂ ವಸ್ತುಗಳ ಮೇಲಿನ ದರ ಏರಿಕೆಯಾಗಿವೆ ಎಂದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಜಿಲ್ಲಾ ಸಮಿತಿ ಮುಖಂಡರಾದ ಜೀವನ್‌ರಾಜ್ ಕುತ್ತಾರ್, ನಿತಿನ್ ಕುತ್ತಾರ್, ನಗರ ಸಮಿತಿ ಪದಾಧಿಕಾರಿಗಳಾದ ನೌಶಾದ್ ಬೆಂಗರೆ, ರಫೀಕ್ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News