×
Ad

ಕೊಲ್ಯ: ಸೆ.28 ರಿಂದ ಶ್ರೀ ಶಾರದಾ ಮಹೋತ್ಸವ

Update: 2017-09-26 20:07 IST

ಉಳ್ಳಾಲ,ಸೆ.26: ಸೋಮೇಶ್ವರ ಕೊಲ್ಯದ  ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಚರಿಸುವ 36 ನೇ ವರ್ಷದ  ಶ್ರೀ ಶಾರದಾ ಮಹೋತ್ಸವ ಸೆ.28 ರಂದು ವಿಗ್ರಹ ಪ್ರತಿಷ್ಠೆಯಿಂದ ಆರಂಭಗೊಂಡು ಅ.1 ರಂದು ಸಂಜೆ 8 ಕ್ಕೆ ಶೋಭಾಯಾತ್ರೆ ನಡೆದು  ಜಲಸ್ಥಂಭನಗೊಳ್ಳಲಿದೆ ಎಂದು  ಉತ್ಸವ ಸಮಿತಿಯ ಗೌರವ ಸಲಹೆಗಾರ  ತೋನ್ಸೆ ಪುಷ್ಕಳ್  ಕುಮಾರ್ ಹೇಳಿದ್ದಾರೆ.

ಕೊಲ್ಯ  ಶ್ರೀ ಶಾರದಾ ಸಭಾ ಸದನದಲ್ಲಿ ಮಂಗಳವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು  ಸೋಮೇಶ್ವರದ ಮದ್ವೇಶರ್ ಭಟ್ ಇವರ ನೇತೃತ್ವದಲ್ಲಿ ಬೆಳಿಗ್ಗೆ 9.15ಕ್ಕೆ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಸೆ. 28 ರಂದು 11.00ಕ್ಕೆ ನಡೆಯುವ  ಧಾರ್ಮಿಕ ಸಭೆಯಲ್ಲಿ  ಅದ್ಯಪಾಡಿ ಶ್ರೀ ನೀಲಕಂಠ  ಉಮಾಮಹೇಶ್ವರ ದೇವಸ್ಥಾನದ  ಮೊಕ್ತೇಸರ ಶೆಡ್ಡೆ ಮಂಜುನಾಥ ಭಂಡಾರಿ ವಹಿಸಲಿದ್ದು,  ಚಾರ್ಟೆಡ್ ಅಕೌಂಟೆಂಟ್ ಎಸ್ ಎಸ್ ನಾಯಕ್  ಉದ್ಘಾಟಿಸಲಿದ್ದಾರೆ. 

ವಿಟ್ಲ ಹಿಂದು ಜಾಗರಣ ವೇದಿಕೆ ಸಂಚಾಲಕ ಕೆದಿಲ ಬಾ.ಗಣರಾಜ್ ಭಟ್ ರಿಂದ ಧಾರ್ಮಿಕ ಉಪನ್ಯಾಸ ಹಾಘೂ  ಸೋಮನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್, ಉದ್ಯಮಿ ಕಿರಣ್ ರೈ ಬಜಾಲ್ ಭಾಗವಹಿಸಲಿದ್ದಾರೆ. 
ಸಮಾರೋಪ ಧಾರ್ಮಿಕ ಸಭೆಯಲ್ಲಿ  ಗುರುಪುರ  ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ  ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶ್ರೀನಿವಾಸ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಅಣ್ಣಯ್ಯ ಕುಲಾಲ್ ಅಧ್ಯಕ್ಷತೆ,  ಮೇಯರ್ ಕವಿತಾ ಸನಿಲ್, ಉದ್ಯಮಿ ಜಯರಾಮ ಶೇಖ,  ಲೋಕೇಶ್ ದೇಲಂಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ  ನಿವೃತ್ತ ಸೇನಾನಿ ಪ್ರಸಾದ್ ಜಿ.ಎಸ್ ಕುಂಪಲ ಮತ್ತು  ಪಶ್ಚಿಮ್  ರಿಹಾಬ್  ವೃದ್ಧಾಶ್ರಮದ ನಿರ್ದೇಶಕ  ರೋಹಿತ್ ಸಾಂಕ್ತುಸ್ ಇವರನ್ನು ಸನ್ಮಾನಿಸಲಾಗುವುದು. ಉತ್ಸವದ ಸಂದರ್ಭ  ಲಲಿತಾ ಸಹಸ್ರನಾಮ, ಭಜನೆ, ಮಹಾಪೂಜೆ,  ಭಕ್ತಿ ರಸಮಂಜರಿ, ನೃತ್ಯ ವೈವಿಧ್ಯ, ತುಳು ಪೌರಾಣಿಕ ನಾಟಕ ನಡೆಯಲಿದೆ  ಎಂದರು. 

ಉತ್ಸವ ಸಮಿತಿ  ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು,  ಶ್ರಮದಾನ,  ಅಶಕ್ತರಿಗೆ ಸಹಾಯ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಹುಚ್ಚುನಾಯಿ ಕಡಿತ ಲಸಿಕೆ, ಅನಾಥಾಶ್ರಮಗಳಿಗೆ ಊಟ, ಅವಶ್ಯಕ ಸಾಮಗ್ರಿಗಳ ಕೊಡುಗೆ,  ಕ್ರೀಡೋತ್ಸವ ವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಸುದ್ಧಿಗೋಷ್ಠಿಯಲ್ಲಿ  ಗೌರವಾಧ್ಯಕ್ಷ ಸೀತಾರಾಮ ಬಂಗೇರ ಕೊಲ್ಯ,  ಅಧ್ಯಕ್ಷರು ಯಶೋಧರ ಟಿ.ಕೊಲ್ಯ, ಪ್ರ.ಕಾರ್ಯದರ್ಶಿ ಉಮೇಶ್ ಕುಲಾಲ್ ಕನೀರುತೋಟ,  ಲಿಂಗಪ್ಪ ಪೂಜಾರಿ ಕೊಲ್ಯ, ಪ್ರಕಾಶ್  ಎಚ್. ಕೊಲ್ಯ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News