×
Ad

ಅಡಿಕೆ ಕೃಷಿಕರನ್ನು ಬೆಂಬಲಿಸುವ ಭರವಸೆ ನೀಡಿದ ಆದಿತ್ಯನಾಥ್

Update: 2017-09-26 20:28 IST

ಮಂಗಳೂರು,ಸೆ.26: ಸೆ.21ರಂದು ದೆಹಲಿಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‍ ಹಾಗೂ ಆರೋಗ್ಯ ಸಚಿವರಾದ  ಸಿದ್ದಾರ್ಥನಾಥ ಸಿಂಗ್‍ ರವರನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು ಭೇಟಿಯಾಗಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಸಹಕಾರಿ ನಿಯಮಿತ (KRAMPS) ಅಧ್ಯಕ್ಷ ಹಾಗೂ ಖಾದೀ ಗ್ರಾಮೊದ್ಯೋಗ ಮಂಡಳಿಯ ಸದಸ್ಯ ಶ್ರೀ. ಎಚ್.ಎಸ್. ಮಂಜಪ್ಪನವರೂ ಜತೆಗಿದ್ದು ಚರ್ಚೆಯಲ್ಲಿ ಪಾಲ್ಗೊಂಡರು.

ಉತ್ತರ ಪ್ರದೇಶದಲ್ಲಿ ಅಡಿಕೆ ಮಾರಾಟದ ಸಂದರ್ಭ ವಿಧಿಸಲಾಗುತ್ತಿರುವ ಸೆಸ್ (ತೆರಿಗೆ) ಹೆಚ್ಚುವರಿಯಾಗಿ ಹೊರೆಯಾಗುತ್ತಿರುವುದನ್ನು ಮನವರಿಕೆ ಮಾಡಿಕೊಡಲಾಗಿದ್ದು, ಇದನ್ನು ಸೂಕ್ತವಾಗಿ ಪರಿಶೀಲಿಸಿ ಸಕರಾತ್ಮಾಕ ಕ್ರಮ ಕೈಗೊಳ್ಳವುದಾಗಿ ತಿಳಿಸಿದ ಮುಖ್ಯಮಂತ್ರಿಯವರು ಉತ್ತರಪ್ರದೇಶದಲ್ಲಿ ಅಡಿಕೆಯನ್ನು ನಿಷೇಧಿಸುವುದಿಲ್ಲವೆಂದು ಆಶ್ವಾಸನೆ ನೀಡಿದರು.

ಅಡಿಕೆ ಕೃಷಿಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಲ್ಲದೆ ಅವರಿಗೆ ಬೆಂಬಲ ನೀಡುವುದಾಗಿ ಈ ಸಂದರ್ಭದಲ್ಲಿ ಆದಿತ್ಯನಾಥ್ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News