×
Ad

ವಿಮಾನ ನಿಲ್ದಾಣದಲ್ಲೂ ಆಧಾರ್ ಬಳಕೆಗೆ ಚಿಂತನೆ

Update: 2017-09-26 21:44 IST

ಹೊಸದಿಲ್ಲಿ, ಸೆ.26: ವಿಮಾನ ನಿಲ್ದಾಣಗಳಲ್ಲಿ ಆಧಾರ್ ಕಾರ್ಡ್ ಆಧಾರಿತ ಬಯೊಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು ಭಾರತದ ನಾಗರಿಕ ವಿಮಾನಯಾನ ಸಚಿವಾಲಯ ಚಿಂತನೆ ನಡೆಸಿದೆ.

ಆಧಾರ್ ಆಧರಿತ ‘ಇ-ಬೋರ್ಡಿಂಗ್ ’ ಪ್ರವೇಶ ವ್ಯವಸ್ಥೆ ಪ್ರಯಾಣಿಕರಿಗೆ ಅನುಕೂಲಕರ ಹಾಗೂ ಭದ್ರತೆಯ ದೃಷ್ಟಿಯಿಂದ ಹೆಚ್ಚು ಸೂಕ್ತವಾಗಿದೆ. ದೋಹದ ಹಮದ್ ವಿಮಾನನಿಲ್ದಾಣ, ಆಮಸ್ಟರ್‌ಡಮ್‌ನ ಶಿಪೊಲ್ ಹಾಗೂ ಆಸ್ಟ್ರೇಲಿಯದ ಬ್ರಿಸ್ಬೇನ್ ವಿಮಾನನಿಲ್ದಾಣದಂತೆ ಸುಗಮ, ಸುಸೂತ್ರ ಹಾಗೂ ‘ಪೇಪರ್‌ಲೆಸ್’ ಪ್ರಕ್ರಿಯೆಗೆ ಇದು ಪೂರಕವಾಗಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

 ಪ್ರಸ್ತುತ ವಿಮಾನನಿಲ್ದಾಣದ ಒಳಗೆ ಪ್ರವೇಶಿಸಬೇಕಿದ್ದರೆ ಪ್ರಯಾಣಿಕರು ತಮ್ಮ ಮುದ್ರಿತ ಟಿಕೇಟು, ಸರಕಾರದಿಂದ ಅನುಮೋದಿಸಲ್ಪಟ್ಟಿರುವ ಗುರುತು ಪತ್ರವನ್ನು ಅಧಿಕಾರಿಗಳಿಗೆ ತೋರಿಸಬೇಕು.

ವಿಪ್ರೊ ಸಂಸ್ಥೆ ವಿಮಾನ ನಿಲ್ದಾಣದದಲ್ಲಿ ಆಧಾರ್ ಆಧರಿತ ಪ್ರವೇಶ ವ್ಯವಸ್ಥೆಯ ನೀಲನಕಾಶೆ ರೂಪಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News