ಎಕ್ಕೂರು : ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು
Update: 2017-09-26 22:35 IST
ಮಂಗಳೂರು, ಸೆ. 26: ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರಿನಲ್ಲಿ ಲಾರಿಯೊಂದು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಜಪ್ಪಿನಮೊಗರು ನಿವಾಸಿ ಕೆ.ವಿ. ಬಾಲಕೃಷ್ಣ ಪಂಡಿತ್ (43)ಎಂದು ಗುರುತಿಸಲಾಗಿದೆ. ಇವರು ಬೈಕಂಪಾಡಿಯಲ್ಲಿ ಗ್ಯಾಸ್ ಏಜನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಎಕ್ಕೂರು ಬಳಿ ಈ ಅಪಘಾತ ನಡೆದಿದೆ.
ಕಂಕನಾಡಿ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.