×
Ad

ಧಾರ್ಮಿಕ ಆಚರಣೆ ನೆಪದಲ್ಲಿ ಬಾಲಕಿಯರನ್ನು ಅರೆನಗ್ನ ಗೊಳಿಸಿದರು!

Update: 2017-09-26 22:43 IST

ಚೆನ್ನೈ, ಸೆ. 26: ತಮಿಳುನಾಡಿನ ದೇವಾಲಯಗಳ ಪಟ್ಟಣ ಮಧುರೈಯಲ್ಲಿ ವಿಲಕ್ಷಣ ಸಂಪ್ರದಾಯವೊಂದು ಬೆಳಕಿಗೆ ಬಂದಿದೆ. ಇಲ್ಲಿನ ದೇವಾಲಯವೊಂದರಲ್ಲಿ ಧಾರ್ಮಿಕ ಆಚರಣೆಯ ಒಂದು ಭಾಗವಾಗಿ ಪ್ರೌಡಾವಸ್ಥೆಗೆ ತಲುಪಲಿರುವ ಬಾಲಕಿಯರನ್ನು ಅರೆನಗ್ನವಾಗಿ ನಿಲ್ಲಿಸಲಾಗಿದೆ.

 ಪುರುಷ ಅರ್ಚಕನ ಆರೈಕೆ ಮಾಡಲು 7 ಬಾಲಕಿಯರು 15 ದಿನಗಳ ಕಾಲ ದೇವಾಲಯದಲ್ಲಿ ಉಳಿದುಕೊಳ್ಳುತ್ತಿದ್ದು, ಸಂಪ್ರದಾಯದ ಒಂದು ಭಾಗವಾಗಿ ಇವರನ್ನು ದೇವತೆಯಂತೆ ಶೃಂಗರಿಸಲಾಗುತ್ತದೆ ಹಾಗೂ ಎದೆಯ ಭಾಗವನ್ನು ಕೇವಲ ಆಭರಣಗಳಿಂದ ಮಾತ್ರ ಮುಚ್ಚಲಾಗುತ್ತದೆ.

ಮಧುರೈ ದೇವಾಲಯದಲ್ಲಿ ಈ ವಿಲಕ್ಷಣ ಆಚರಣೆ ವರದಿಯಾದ ಬಳಿಕ ಸ್ಥಳೀಯ ಆಡಳಿತ ಮಧ್ಯ ಪ್ರವೇಶಿಸಿದ್ದು, ಬಾಲಕಿಯರು ಮೈಮುಚ್ಚಲು ಅವಕಾಶ ನೀಡಬೇಕು ಎಂದು ಆದೇಶ ಜಾರಿಮಾಡಿದೆ.

ಈ ಬಗ್ಗೆ ಮಧುರೈ ಜಿಲ್ಲಾಧಿಕಾರಿ ಕೆ. ವೀರ ರಾಘವ ರಾವ್ ನೊಟೀಸು ಜಾರಿ ಮಾಡಿದ್ದಾರೆ. ಆದರೆ, ಈ ಆಚರಣೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ಸೂಚನೆ ನೀಡಿದ್ದಾರೆ.

ಪ್ರಾಚೀನ ಸಂಪ್ರದಾಯದ ಒಂದು ಭಾಗ ಈ ಆಚರಣೆ. ಹೆತ್ತವರು ತಮ್ಮ ಮಕ್ಕಳನ್ನು ಸ್ವಯಂಪ್ರೇರಿತವಾಗಿ ದೇವಾಲಯಕ್ಕೆ ಕಳುಹಿಸುತ್ತಿದ್ದಾರೆ ಎಂದು ರಾವ್ ಹೇಳಿದ್ದಾರೆ. ದೇವಾಲಯದಲ್ಲಿ ಬಾಲಕಿಯರಿಗೆ ಕಿರುಕುಳ ನೀಡಿರುವ ಯಾವುದೇ ಘಟನೆ ತನಿಖೆಯಿಂದ ಬೆಳಕಿಗೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News