ಅಂತಾರಾಷ್ಟ್ರೀಯ ಮಟ್ಟದ ಕೊಂಕಣಿ ಸಂಶೋಧನಾ ಪ್ರಬಂಧ ಮಂಡನಾ ಸಮ್ಮೇಳನ

Update: 2017-09-27 12:31 GMT

ಮಂಗಳೂರು, ಸೆ. 27: ಕೊಂಕಣಿ ಅಕಾಡಮಿಯು ಅಂತಾರಾಷ್ಟ್ರೀಯ ಮಟ್ಟದ ಕೊಂಕಣಿ ಭಾಷಾ ಸಮ್ಮೇಳನವನ್ನು ಮುಂದಿನ 2018ರ ಜನವರಿಯಲ್ಲಿ ಆಯೋಜಿಸಿದೆ.

ಈ ಪ್ರಯುಕ್ತ ಅಕಾಡಮಿಯ ಅಧ್ಯಕ್ಷ ಆರ್.ಪಿ.ನಾಯ್ಕ ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 150ನೆ ವರ್ಷಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ.

ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯವು ಎಂ.ಎ. ಕೊಂಕಣಿಯನ್ನು ಆರಂಭಿಸಿ ಪ್ರೋತ್ಸಾಹಿಸಿರುವ ಬಗ್ಗೆ ಕುಲಸಚಿವರಿಗೆ ಅಭಿನಂದಿಸಲಾಯಿತು. ಕೊಂಕಣಿ ಅಕಾಡೆಮಿಯ ಸ್ಥಾಪನೆಗೆ ಕಾರಣೀಕರ್ತರಾದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ವೀರಪ್ಪ ಮೊಯ್ಲಿಯವರು 150ನೆ ವರ್ಷಾಚರಣೆಯ ಸಮಿತಿಯ ಅಧ್ಯಕ್ಷರಾಗಿದ್ದು, ಈ ಬಗ್ಗೆ ಸಮಿತಿಯು ಆಯೋಜಿಸಿರುವ ವಿವಿಧ ಯೋಜನೆಗಳ ಜತೆಗೆ ಈ ಕೊಂಕಣಿ ಸಮ್ಮೇಳನವನ್ನು ಆಯೋಜಿಸಲು ಅವಕಾಶ ಕಲ್ಪಿಸಿರುವ ಬಗ್ಗೆ ಆಕಾಡೆಮಿಯು ಹರ್ಷ ವ್ಯಕ್ತಪಡಿಸಿದೆ ಎಂದು ಅಕಾಡಮಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News