ಸಾಂಬಾರು ಬೆಳೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸಹಾಯಧನ
ಮಂಗಳೂರು, ಸೆ.27: ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ದಿ ಮಂಡಳಿಯ ವತಿಯಿಂದ ಸಾಂಬಾರು ಬೆಳೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಂಬಾರು ಬೆಳೆಗಾರರಿಗೆ ಉತ್ತಮ ಆಧುನಿಕ ಮಾಹಿತಿಯನ್ನು ನೀಡಿ ಅವರ ಕುಶಲತೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ಆದಾಯವನ್ನು ಹೆಚ್ಚಿಸುವ ಕುರಿತು ಹಲವಾರು ಫಲಾನುಭವಿ ಆಧಾರಿತ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಇವುಗಳಲ್ಲಿ ಪ್ರಮುಖ ವಿವಿಧ ಪ್ರಾಥಮಿಕ ಸಂಸ್ಕರಣಾ ಘಟಕಗಳಾದ ಸಂಚಾರಿ ಅರಿಷಿಣ ಸಂಸ್ಕರಣಾ ಘಟಕ, (ಅರಿಷಿಣ ಕುದಿಸುವ ಯಂತ್ರ ಮತುತಿ ಪಾಲಿಂಗ್ ಮೆನ್), ಶುಂಠಿ ಸಂಸ್ಕರಣಾ ಘಟಕ, ಕಾಳುಮೆಣಸು ಸಂಸ್ಕರಣಾ ಘಟಕ, ಹುಣಸೆ ಸಂಸ್ಕರಣಾ ಘಟಕ ಇತ್ಯಾದಿಗಳಿಗೆ ಸಹಾಯಧನ ನೀಡಲಾಗುತ್ತಿದೆ.
ಇದಲ್ಲದೆ, ಸಾಂಬಾರು ಬೆಳೆಗಾರರಿಗೆ ಕೃಷಿ ಉತ್ಪಾದನಾ ವೆಚ್ಚ ಕಡಿಮೆಗೊಳಿಸಲು ವಿವಿಧ ಯಂತ್ರೋಪಕರಣಗಳಾದ ಅಲ್ಯುಮಿನಿಯಂ ಲ್ಯಾಡರ್, ಕಾಳುಮೆಣಸು ಬಿಡಿಸುವ ಯಂತ್ರ, ಪವರ್ ಸ್ಪ್ರೇಯರ್, ಪವರ್ ವೀಡರ್ ಇತ್ಯಾದಿ ಮತ್ತು ಉತ್ತಮ ಗುಣಮಟ್ಟದ ಸಾಂಬಾರು ಪದಾರ್ಥಗಳ ಕೊಯ್ಲೋತ್ತರ ನಿರ್ವಹಣೆಗಾಗಿ ಟಾರ್ಪಲಿನ್‌ಗಳ ವಿತರಣೆಯನ್ನು ಸಹಾಯಧನದಡಿ ಕೈಗೊಳ್ಳಲಾಗಿದೆ ಎಂದು ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.
ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ತಾಲೂಕು ತೋಟಗಾರಿಕೆ ಇಲಾಖೆ ಅಥವಾ ನೇರವಾಗಿ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿಮಂಡಳಿ ಹುಬ್ಬಳ್ಳಿ ದೂರವಾಣಿ ಸಂಖ್ಯೆ: 9844071683, 8139967561ಗಳಿಗೆ ಸಂಪರ್ಕಿಸಲು ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಂಗಳೂರು ಇವರ ಪ್ರಕಟನೆ ತಿಳಿಸಿದೆ.ಅ.2ರಂದು ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನದ ವಾರ್ಷಿಕ ಗೌರವ ಪ್ರದಾನಮಂಗಳೂರು, ಸೆ.27: ಮಹಾತ್ಮಾಗಾಂಧಿ 150ರ ಪೂರ್ವಭಾವಿ ಸಂಭ್ರಮದಲ್ಲಿ 147ನೆ ಜನ್ಮದಿನಾಚರಣೆ ಮತ್ತು ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನದ ವಾರ್ಷಿಕ ಗೌರವ 2017 ಕಾರ್ಯಕ್ರಮವು ಅ.2 ರಂದು ನಗರದ ಟಾಗೋರ್ ಪಾರ್ಕ್‌ನ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ನಡೆಯಲಿದೆ.
ಧ್ವಜಾರೋಹಣವು ಬೆಳಗ್ಗೆ 9.30ಕ್ಕೆ ಹಾಗೂ ಸಭಾ ಕಾರ್ಯಕ್ರಮ ಬೆಳಗ್ಗೆ 10.15ಕ್ಕೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ. ಸದಾನಂದ ಶೆಟ್ಟಿ ವಹಿಸಲಿದ್ದಾರೆ. ಆಳ್ವಾಸ್ ಕಾಲೇಜಿನ ಉಪನ್ಯಾಸರಾದ ಸುಧಾರಾಣಿ ಮಾತನಾಡಲಿದ್ದಾರೆ.ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ವಾರ್ಷಿಕ ಗೌರವವನ್ನು ನವಸಾಕ್ಷರೆ, ಕಳೆದ 12 ವರ್ಷಗಳಿಂದ ಪ್ಲಾಸ್ಟಿಕ್ ತ್ಯಾಜ್ಯದ ಅಪಾಯ ಮತ್ತು ಗ್ರಾಮೀಣ ಬದುಕಿಗೆ ಪ್ರೇರಕಿಯಾಗಿ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಗಮನ ಸೆಳೆದ ಪ್ರೇಮಾ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಅ.5ರಂದು ಮಹರ್ಷಿ ವಾಲ್ಮೀಕಿ ಜಯಂತಿಮಂಗಳೂರು, ಸೆ.27: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ದ.ಕ. ಜಿಲ್ಲೆ ವಾಲ್ಮೀಕಿ ನಾಯಕ ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯು ಅ. 5ರಂದು ಬೆಳಗ್ಗೆ 10:30ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.