ಅ. 5: ಬೆಳ್ತಂಗಡಿಯ ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡಮಿ ಸ್ಥಳಾಂತರ
ಬೆಳ್ತಂಗಡಿ, ಸೆ. 27: ಕಳೆದ 7 ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿರುವ ಬೆಳ್ತಂಗಡಿಯ ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡಮಿಯು ಅ. 5 ರಂದು ಇಲ್ಲಿನ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಗೆ ಸ್ಥಳಾಂತರಗೊಂಡು ಉದ್ಘಾಟನೆಗೊಳ್ಳಲಿದೆ ಎಂದು ನೃತ್ಯ ನಿರ್ದೇಶಕ ಪ್ರೊ. ಜಿತೇಶ್ ಕುಮಾರ್ ತಿಳಿಸಿದರು. ಅವರು ಬುಧವಾರ ಪತ್ರಿಕಾಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿದರು.
ಅಕಾಡಮಿಯು ವಿವಿಧ ಬಗೆಯ ನೃತ್ಯಗಳಿಗೆ , ನಾಟಕಗಳಿಗೆ ಅಭಿನಯ, ಚಲನಚಿತ್ರ ಗೀತೆಗಳ ಹಾಡುವಿಕೆ, ಕರಾಟೆ, ಎರೋಬಿಕ್ ಕಲೆಗಳನ್ನು ಕಲಿಸಿಕೊಂಡು ಬರುತ್ತಿದೆ. ಸ್ಥಳಾಂತರಗೊಳ್ಳುವ ದಿನ ಶ್ರೀ ಸಾಯಿ ನಾಸಿಕ್ ಬ್ಯಾಂಡ್, ಭಗವತಿ ವ್ಯಾಘ್ರ ಬಳಗದವರಿಂದ ಫಿಲಿನಲಿಕೆ ನಡೆಯಲಿದೆ. ಉದ್ಘಾಟನೆ ಸಂದರ್ಭ ನೃತ್ಯಗಾತಿಯರಾದ ದೀಕ್ಷಾ ಡಿ. ರೈ, ವಿ.ಜೆ.ಪೂರ್ವಿ ಕೆ. ರಾವ್, ಹಾಸ್ಯ ಕಲಾವಿದರಾದ ಅನೀಶ್ ಅಮೀನ್, ಹಿತೇಶ್ ಕುಮಾರ್ ಕಾಪಿನಡ್ಕ, ನಿರ್ಮಾಪಕ ಸುಶಾನ್ ರೈ ಮಾವಿನಕಟ್ಟೆ ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ತರಬೇತುದಾರರಾದ ಶಾಲಿನಿ ನಾಗೇಶ್, ರತ್ನಾವತಿ ರಾಮ್, ಮೋಹಿತ್ ಕುಮಾರ್, ಭುವನ್ ಇದ್ದರು.