ಪಾನ ನಿಷೇಧದ ಅಧ್ಯಯನಕ್ಕೆ ಬಿಹಾರ ಪ್ರವಾಸ: ರುದ್ರಪ್ಪ

Update: 2017-09-27 13:36 GMT

ಉಡುಪಿ, ಸೆ.27: ಮದ್ಯಪಾನ ನಿಷೇಧದ ಕುರಿತ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ಅ.2ರಂದು ಬಿಹಾರ ರಾಜ್ಯ ಪ್ರವಾಸ ನಡೆಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಎಚ್.ಸಿ.ರುದ್ರಪ್ಪ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಹಾರದಂತೆ ಕರ್ನಾಟಕ ರಾಜ್ಯದಲ್ಲೂ ಮದ್ಯ ಪಾನ ನಿಷೇಧ ಮಾಡಿದರೆ ಯಾವ ರೀತಿ ಪರಿಣಾಮ ಆಗಬಹುದು, ಇದ ರಿಂದ ಮದ್ಯಸೇವನೆ ಜಾಸ್ತಿ ಆಗಬಹುದೇ ಅಥವಾ ಕಡಿಮೆ ಆಗಬಹುದೇ ಎಂಬುದರ ಬಗ್ಗೆ ತಿಳಿದುಕೊಳ್ಳಲಾಗುವುದು ಎಂದರು.

ಪ್ರತಿ ಜಿಲ್ಲೆಯ 20 ಕಡೆಗಳಲ್ಲಿ ಬೀದಿ ನಾಟಕ ಪ್ರದರ್ಶಿಸಿ ಕುಡಿತದ ದುಷ್ಪರಿ ಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಮದ್ಯ ಸೇವಿಸಿದವರು ಸಂಯಮದಿಂದ ಇರುವಂತೆ ಅರಿವು ಮೂಡಿ ಸಲಾಗುವುದು. ತಾಲೂಕು ಮಟ್ಟದಲ್ಲಿ ಶಾಲಾ ಕಾಲೇಜುಗಳಲ್ಲಿ ವಿಚಾರ ಸಂಕಿ ರಣಗಳನ್ನು ಆಯೋಜಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಫಲಕಗಳನ್ನು ಹಾಕಲಾ ಗುತ್ತಿದೆ. ಆಕಾಶವಾಣಿಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ, ಮೈಸೂರು ದಸರಾದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತದೆ. ಮಂಡಳಿಗೆ ಸರಕಾರ ವಾರ್ಷಿಕ 82ಲಕ್ಷ ರೂ. ಅನುದಾನವನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವ ಹಣಾಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News