ಅಲ್ಪಸಂಖ್ಯಾತರಿಗೆ 2,750 ಕೋ.ರೂ. ಅನುದಾನ: ಐವನ್ ಡಿಸೋಜ
Update: 2017-09-27 20:04 IST
ಮಂಗಳೂರು, ಸೆ.27: ರಾಜ್ಯ ಸರಕಾರವು 2017-18ನೆ ಸಾಲಿನಲ್ಲಿ 2,750 ಕೋ.ರೂ. ಅನುದಾನವನ್ನು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟಿದೆ. ಇದು ಬಳಕೆಯಾಗುವಂತಾಗಲು ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಇಲಾಖೆಯು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ಬಜ್ಪೆ ಸಮೀಪದ ಎಕ್ಕಾರುವಿನಲ್ಲಿ ಎಕ್ಕಾರು ಗ್ರಾಪಂ ಸದಸ್ಯೆ ನಫೀಸಾ ಖಾನ್ ಆಯೋಜಿಸಿದ್ದ ಸರಕಾರಿ ಯೋಜನೆಗಳ ಬಗ್ಗೆ ಅಲ್ಪಸಂಖ್ಯಾತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭ ಬಜ್ಪೆಗ್ರಾಪಂ ಅಧ್ಯಕ್ಷೆ ರೋಸಲೀನ್ ಮಥಾಯಸ್, ಉಪಾಧ್ಯಕ್ಷ ಮುಹಮ್ಮದ್ ಶರೀಫ್, ಸದಸ್ಯರಾದ ಸಿರಾಜ್ ಬಜ್ಪೆ, ವೇದಾ ಶೆಟ್ಟಿ, ಜೇಕಬ್ ಪಿರೇರಾ, ಎಕ್ಕಾರ್ ಗ್ರಾಪಂ ಸದಸ್ಯ ಹುಸೈನ್ ಉಪಸ್ಥಿತರಿದ್ದರು.