×
Ad

ಸಂಯಮ ಮಂಡಳಿಯಿಂದ ಅರಿು ಕಾರ್ಯಕ್ರಮ: ಎಚ್.ಸಿ.ರುದ್ರಪ್ಪ

Update: 2017-09-27 20:42 IST

ಉಡುಪಿ, ಸೆ.27: ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಸ್ಪತ್ರೆ ರೀತಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮದ್ಯ, ಮಾದಕ ವಸ್ತು ಸೇವನೆಯಿಂದಾಗುವ ಹಾನಿಗಳ ಬಗ್ಗೆ, ದುಶ್ಚಟಗಳ ನಿಯಂತ್ರಣ ಕುರಿತು ಅರಿವು ಮೂಡಿಸಿ ಸಂಯಮ ಪಾಲನೆಗೆ ಒತ್ತು ನೀಡುತ್ತಿರುವುದಾಗಿ ಮಂಡಳಿ ಅಧ್ಯಕ್ಷ ಹೆಚ್.ಸಿ.ರುದ್ರಪ್ಪ ಹೇಳಿದ್ದಾರೆ.

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಆಯೋಜಿಸಲಾದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಜೊತೆ ಎಲ್ಲ ಇಲಾಖೆಗಳು ಕೈಜೋಡಿಸಿ ಜನರನ್ನು ದುಶ್ಚಟಗಳಿಂದ ವಿಮುಕ್ತರನ್ನಾಗಿಸಲು ಸಹಕರಿಸಬೇಕು. ಜನರು ಚಟಗಳ ಬಗ್ಗೆ ಸಂಯಮದಿಂದಿರಲು ಗ್ರಾಮ ಮಟ್ಟಗಳಲ್ಲಿ ಕಾರ್ಯಕ್ರಮ ಗಳಾಗಬೇಕೆಂದು ಹೇಳಿದರು.

ಬಹು ಮಾಧ್ಯಮಗಳ ಮೂಲಕ ದುಶ್ಚಟಗಳಿಂದಾಗುವ ಸಾಮಾಜಿಕ ಹಾನಿ, ವೈಯಕ್ತಿಕ ಹಾನಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಮಂಡಳಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದಧಿ ಯೋಜನೆ ಆಯೋಜಿ ಸುವ ಮದ್ಯವರ್ಜನ ಶಿಬಿರಗಳಿಗೆ ಮಂಡಳಿ ಎಲ್ಲ ಸಹಕಾರ ನೀಡಲಿದೆ. ಹಲವು ವರ್ಷಗಳಿಂದ ನೀಡದೆ ಉಳಿದ ಸಂಯಮ ಪ್ರಶಸ್ತಿಯನ್ನು ಇತ್ತೀಚೆಗೆ ಮೈಸೂರಿ ನಲ್ಲಿ ವಿತರಿಸಲಾಗಿದೆ ಎಂದರು. 

ಜಿಲ್ಲಾಡಳಿತ ಸ್ವಾಸ್ಥ್ಯ ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದ ಅವರು, ಈಗಾಗಲೇ 1124 ಅರಿವು ಮೂಡಿಸುವ ಕಾರ್ಯಕ್ರಮ ಗಳನ್ನು ರಾಜ್ಯಾದ್ಯಂತ ಮಾಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಅಬಕಾರಿ ಇಲಾಖೆ ಕೆ.ಬಿ. ಮೇರು ನಂದನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News