×
Ad

25,000 ಕೋ.ರೂ.ಗಳ ಆಂತರಿಕ ಭದ್ರತಾ ಯೋಜನೆಗೆ ಸರಕಾರದ ಸಮ್ಮತಿ

Update: 2017-09-27 20:55 IST

ಹೊಸದಿಲ್ಲಿ,ಸೆ.27: ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಗೊಳಿಸಲು, ಪೊಲೀಸ್ ಪಡೆಗಳನ್ನು ಆಧುನೀಕರಿಸಲು ಮತ್ತು ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು 25,000 ಕೋ.ರೂ.ಗಳ ಬೃಹತ್ ಆಂತರಿಕ ಭದ್ರತಾ ಯೋಜನೆಗೆ ಸರಕಾರವು ಬುಧವಾರ ಹಸಿರು ನಿಶಾನೆಯನ್ನು ತೋರಿಸಿದೆ ಎಂದು ಗೃಹಸಚಿವ ರಾಜನಾಥ ಸಿಂಗ್ ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿಯು 2017-18ರಿಂದ 2019-20ರವರೆಗೆ ಪೊಲೀಸ್ ಪಡೆಗಳ ಆಧುನೀಕರಣ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ನೀಡಿತು.

ಇದು ದೇಶದಲ್ಲಿ ಈವರೆಗಿನ ಅತ್ಯಂತ ದೊಡ್ಡ ಆಂತರಿಕ ಭದ್ರತಾ ಯೋಜನೆಯಾಗಿದೆ. ಮೂರು ವರ್ಷಗಳಿಗೆ ಯೋಜನೆಯ ವೆಚ್ಚವನ್ನು 25,060 ಕೋ.ರೂ.ಗಳಿಗೆ ನಿಗದಿಗೊಳಿ ಸಲಾಗಿದ್ದು, ಈ ಪೈಕಿ 18,636 ಕೋ.ರೂ.ಗಳನ್ನು ಕೇಂದ್ರ ಮತ್ತು 6,424 ಕೋ.ರೂ.ಗಳನ್ನು ರಾಜ್ಯ ಸರಕಾರಗಳು ಭರಿಸಲಿವೆ ಎಂದು ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ, ಮಹಿಳೆಯರ ಸುರಕ್ಷತೆ, ಆಧುನಿಕ ಶಸ್ತ್ರಾಸ್ತ್ರಗಳ ಲಭ್ಯತೆ, ಪೊಲೀಸ್ ಪಡೆಗಳ ಚಲನವಲನ, ಬಾಡಿಗೆ ಹೆಲಿಕಾಪ್ಟರ್, ಪೊಲೀಸ್ ನಿಸ್ತಂತು ವ್ಯವಸ್ಥೆಯ ಉನ್ನತೀಕರಣ, ರಾಷ್ಟ್ರೀಯ ಉಪಗ್ರಹ ಜಾಲ, ಅಪರಾಧ ಮತ್ತು ಅಪರಾಧಿ ಜಾಡು ಪತ್ತೆ ಜಾಲ ಮತ್ತು ವ್ಯವಸ್ಥೆಗಳು, ಇ-ಜೈಲುಗಳು ಇತ್ಯಾದಿಗಳಿಗೆ ಈ ಯೋಜನೆಯಡಿ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News