×
Ad

​ಅಮಲು ಮಾತ್ರೆ, ಸಿರಪ್ ಮಾರಾಟ ಜಾಲ ಪತ್ತೆ

Update: 2017-09-27 21:13 IST

ಮಂಗಳೂರು, ಸೆ. 27: ನಗರದ ಶಾರದಾ ವಿದ್ಯಾಲಯ ರಸ್ತೆಯಲ್ಲಿರುವ ಮೆಡಿಕಲ್ ಅಂಗಡಿಯೊಂದರಲ್ಲಿ ವೈದ್ಯರ ಚೀಟಿ ಇಲ್ಲದೆ ದುಪ್ಪಟ್ಟು ಬೆಲೆಗೆ ಅಮಲು ಮಾತ್ರೆ ಹಾಗೂ ಸಿರಪ್‌ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ನಗರದ ಪೊಲೀಸರು ಪತ್ತೆ ಮಾಡಿದ್ದಾರೆ.

ತಲಾ 15 ಮಾತ್ರೆ ಇರುವ 10 ಸ್ಟ್ರಿಪ್‌ಗಳನ್ನು ಮತ್ತು 100 ಮಿ.ಲೀ.ನ 30 ಬಾಟ್ಲಿ ಸಿರಪ್ ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಉಪ ಔಷಧ ಸಹಾಯಕ ನಿಯಂತ್ರಕರಿಗೆ ಹಸ್ತಾಂತರಿಸಿದ್ದಾರೆ.

ಬಜಿಲಕೇರಿಯ ಶಾಲೆಯ ಬಳಿಯ ನಿವಾಸಿ ಅಝರ್ ಯಾನೆ ಮುಹಮ್ಮದ್ ಅಝರ್ ಸೆ. 25ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ. ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತಿಯಾದ ಅಮಲು ಮಾತ್ರೆ ಹಾಗೂ ಸಿರಪ್ ಸೇವಿಸಿದ್ದನ್ನು ಒಪ್ಪಿಕೊಂಡ. ಅಲ್ಲದೆ ಅದನ್ನು ಖರೀದಿಸಿದ ಅಂಗಡಿಯ ವಿವರ ನೀಡಿದ್ದ. ಅದರಂತೆ ಪೊಲೀಸರು ತನಿಖೆ ನಡೆಸಿ ಅಮಲು ಮಾತ್ರೆ ಮಾರಾಟದ ಅಂಗಡಿ ಪತ್ತೆ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News