ರಂಗಭೂಮಿಯಿಂದ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ
ಉಡುಪಿ, ಸೆ.27: ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ರಂಗೂಮಿ ಉಡುಪಿ ನ.18ರಿಂದ ಡಿ.2ರವರೆಗೆ ಡಾ.ಟಿ.ಎಂ.ಎ. ಪೈ, ಮಲ್ಪೆ ಮಧ್ವರಾಜ್ ಹಾಗೂ ಎಸ್.ಎಲ್. ನಾರಾಯಣ ಭಟ್ ಸ್ಮಾರಕ ರಾಜ್ಯ ಮಟ್ಟದ 38ನೇ ಕನ್ನಡ ನಾಟಕ ಸ್ಪರ್ಧೆಯನ್ನು ಉಡುಪಿಯಲ್ಲಿ ಹಮ್ಮಿಕೊಂಡಿದೆ.
ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗ ಪರಿಕರ, ಪ್ರಸಾಧನ, ಬಾಲನಟನೆ/ಹಾಸ್ಯ ಪಾತ್ರಗಳಿಗೂ ನಗದು ಸಹಿತ ಬಹುಮಾನ ನೀಡಲಾಗುವುದು. ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಉಡುಪಿಗೆ ಹೋಗಿ ಬರುವ ಪ್ರಯಾಣ ವೆಚ್ಚವನ್ನು ಗೌರವ ಧನದೊಂದಿಗೆ ನೀಡಲಾಗುವುದು.
ಭರ್ತಿ ಮಾಡಿದ ಪ್ರವೇಶ ಪತ್ರಗಳನ್ನು ಸ್ವೀಕರಿಸಲು ಅ.22 ಕೊನೆಯ ದಿನವಾಗಿರುತ್ತದೆ. ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ನಂದಕುಮಾರ್ ಎಂ, ಉಪಾಧ್ಯಕ್ಷರು, ರಂಗೂಮಿ(ರಿ), ‘ನಂದಗೋಕುಲ’, ಮಾರ್ಕೆಟ್ ರಸ್ತೆ, ಪರ್ಕಳ, ಉಡುಪಿ-576107 ಇವರಿಗೆ ಬರೆಯಬಹುದು. ಅಥವಾ ಮೊಬೈಲ್ ಸಂಖ್ಯೆ: 9448952847(ಪ್ರದೀಪ್‌ಚಂದ್ರ ಕುತ್ಪಾಡಿ), 9845240309 (ರವಿರಾಜ್ ಹೆಚ್.ಪಿ.) ಇವರನ್ನು ಸಂಪರ್ಕಿಸಬಹುದು ಎಂದು ರಂಗಭೂಮಿ ಪ್ರಕಟಣೆ ತಿಳಿಸಿದೆ.