ಕುಕ್ಕೆಹಳ್ಳಿ: ಅಕ್ರಮ ಮರಳುಗಾರಿಕೆಗೆ ದಾಳಿ
ಹಿರಿಯಡ್ಕ, ಸೆ.27: ಕುಕ್ಕೆಹಳ್ಳಿ ಗ್ರಾಮದ ಮಡಿಸಾಲು ಹೊಳೆಯಲ್ಲಿ ನಡೆ ಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸೆ.26ರಂದು ಬೆಳಗ್ಗೆ 10ಗಂಟೆ ಸುಮಾರಿಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಹಂದಾಡಿ ಗ್ರಾಮದ ಬೇಳೂರು ನಿವಾಸಿ ಪ್ರಜ್ವಲ್ ಶೆಟ್ಟಿ ಎಂಬವರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆಂಬ ಮಾಹಿತಿಯಂತೆ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಡಾ.ಎಚ್.ಎಸ್.ಮಹದೇಶ್ವರ ನೇತೃತ್ವದಲ್ಲಿ ಬ್ರಹ್ಮಾವರ ವಿಶೇಷ ತಹಶೀಲ್ದಾರ್, ಕುಕ್ಕೆಹಳ್ಳಿಯ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು, ಗಣಿ ಭೂ ವಿಜ್ಙಾನ ಇಲಾಖೆಯ ಅಧಿಕಾರಿ ಹಾಗೂ ಪೊಲೀಸ್ ಉನಿರೀಕ್ಷಕರ ತಂಡ ಈ ದಾಳಿ ನಡೆಸಿದೆ.
ಸ್ಥಳದಲ್ಲಿದ್ದ 5 ಕಬ್ಬಿಣದ ಪೈಪ್‌ಗಳು, ಒಂದು ಕಬ್ಬಿಣದ ಜರಡಿ, 2 ಯಾಂತ್ರೀ ಕೃತ ದೋಣಿ, 1 ಹಿಟಾಚಿಯನ್ನು ತಂಡ ವಶಪಡಿಸಿಕೊಂಡಿದೆ. ಇವುಗಳ ಒಟ್ಟು ವೌಲ್ಯ 16,06,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.