ಪಾಕ್ ಹಣಕಾಸು ಸಚಿವ ವಿರುದ್ಧ ದೋಷಾರೋಪ
Update: 2017-09-27 22:09 IST
ಇಸ್ಲಾಮಾಬಾದ್, ಸೆ. 27: ಗೊತ್ತಿರುವ ಆದಾಯ ಮೂಲಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವೊಂದು ಬುಧವಾರ ದೇಶದ ಹಣಕಾಸು ಸಚಿವ ಇಶಾಖ್ ದಾರ್ ವಿರುದ್ಧ ದೋಷಾರೋಪ ಹೊರಿಸಿದೆ.
ಆದರೆ, ತನ್ನ ವಿರುದ್ಧದ ಆರೋಪಗಳನ್ನು ಸಚಿವರು ಒಪ್ಪಿಕೊಳ್ಳಲಿಲ್ಲ. ಈ ಆರೋಪಗಳು ಆಧಾರರಹಿತ ಎಂಬುದಾಗಿ ತಳ್ಳಿಹಾಕಿದರು.
ಸುಪ್ರೀಂ ಕೋರ್ಟ್ ಜುಲೈ 28ರಂದು ನೀಡಿದ ತೀರ್ಪಿನ ಆಧಾರದಲ್ಲಿ, ಗೊತ್ತಿರುವ ಆದಾಯ ಮೂಲಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತು ಹೊಂದಿರುವ ಆರೋಪಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ರಾಷ್ಟ್ರೀಯ ಉತ್ತರದಾಯಿತ್ವ ಸಂಸ್ಥೆ (ಎನ್‌ಎಬಿ) ಸೆಪ್ಟಂಬರ್ 8ರಂದು ದಾರ್ ವಿರುದ್ಧ ಮೊಕದ್ದಮೆ ದಾಖಲಿಸಿತ್ತು.