×
Ad

ಕೆಸಿಎಫ್ ಸಾಂತ್ವನ ನಿಧಿ ಹಸ್ತಾಂತರ

Update: 2017-09-27 22:13 IST

ಕಡಬ, ಸೆ. 27: ಇತ್ತೀಚೆಗೆ ಬಹರೈನ್ ನಲ್ಲಿ ನಿಧನರಾದ ಕಡಬ ಸಮೀಪದ ಮೀನಾಡಿಯ ಶಮೀರಾ ಸಿದ್ದೀಕ್ ರ ಕುಟುಂಬಸ್ಥರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಬಹರೈನ್ ಸಮಿತಿಯ ವತಿಯಿಂದ 1,25,000/- ರೂ.ಗಳ ಸಾಂತ್ವನ ನಿಧಿ ಹಸ್ತಾಂತರಿಸಲಾಯಿತು.

ಮೃತರ ತಂದೆ ಅಬ್ದುಲ್ ರಝಾಕ್ ಮೀನಾಡಿ ಸಾಂತ್ವನ ನಿಧಿ ಸ್ವೀಕರಿಸಿದರು. ಅವರ ಮನೆಗೆ ಭೇಟಿ ನೀಡಿದ ಕೆಸಿಎಫ್ ನಿಯೋಗದಲ್ಲಿ ಐಎನ್ ಸಿ ಪಿಆರ್ ಒ ಜಮಾಲುದ್ದೀನ್ ವಿಟ್ಲ, ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಅಡ್ವೋಕೇಟ್ ಶಾಕಿರ್ ಹಾಜಿ ಪುತ್ತೂರು, ಕಡಬ ಸೆಂಟರ್ ಎಸ್ ವೈ ಎಸ್ ಅಧ್ಯಕ್ಷ ಪಿ.ಕೆ. ಮುಹಮ್ಮದ್ ಮುಸ್ಲಿಯಾರ್ ಹಾಗೂ ಕಡಬ ಸೆಂಟರ್ ಎಸ್ ವೈ ಎಸ್ ಕಾರ್ಯದರ್ಶಿ ಅಬ್ದುಲ್ ನಾಸಿರ್ ಸ ಅದಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News