ಐರ್‌ಲ್ಯಾಂಡ್: ಮುಂದಿನ ವರ್ಷ ಗರ್ಭಪಾತ ನಿಷೇಧದ ಬಗ್ಗೆ ಜನಮತಗಣನೆ

Update: 2017-09-27 16:49 GMT

ಡಬ್ಲಿನ್ (ಐರ್‌ಲ್ಯಾಂಡ್), ಸೆ. 27: ಗರ್ಭಪಾತದ ಮೇಲೆ ವಿಧಿಸಲಾಗಿರುವ ಸಾಂವಿಧಾನಿಕ ನಿಷೇಧವನ್ನು ರದ್ದುಪಡಿಸಬೇಕೆ ಎಂಬ ಬಗ್ಗೆ ಮುಂದಿನ ವರ್ಷ ತಾನು ಜನಮತಗಣನೆ ನಡೆಸುವುದಾಗಿ ಐರ್‌ಲ್ಯಾಂಡ್ ಮಂಗಳವಾರ ಘೋಷಿಸಿದೆ.

ಪೋಪ್ ಫ್ರಾನ್ಸಿಸ್ ಐರ್‌ಲ್ಯಾಂಡ್‌ಗೆ ಭೇಟಿ ನೀಡುವ ಕೆಲವು ವಾರಗಳ ಮೊದಲು ಜನಮತಗಣನೆ ನಡೆಯಲಿದೆ.

ದೇಶದ ದೇವನಿಂದನೆ ವಿರೋಧಿ ಕಾನೂನನ್ನು ತೆಗೆದುಹಾಕುವ ಹಾಗೂ ವಿವಾಹ ವಿಚ್ಛೇದನೆಗೆ ಮೊದಲು ದಂಪತಿ ಪ್ರತ್ಯೇಕವಾಗಿ ವಾಸಿಸುವ ಅವಧಿಯನ್ನು ಕಡಿಮೆ ಮಾಡುವ ಬಗ್ಗೆಯೂ ಜನಮತಗಣನೆ ನಡೆಸುವ ಬಗ್ಗೆ ಸರಕಾರ ಯೋಚಿಸುತ್ತಿದೆ.

ತಾಯಿಯ ಪ್ರಾಣಕ್ಕೆ ನೈಜ ಹಾಗೂ ಗಂಭೀರ ಅಪಾಯವಿರದ ಹೊರತು ಗರ್ಭಪಾತ ಮಾಡುವುದನ್ನು ಸಂವಿಧಾನದ ಎಂಟನೆ ತಿದ್ದುಪಡಿಯು ಕಾನೂನುಬಾಹಿರಗೊಳಿಸಿದೆ.

 ಸಂವಿಧಾನದ ಎಂಟನೆ ತಿದ್ದುಪಡಿಯು ‘ತೀರಾ ನಿರ್ಬಂಧಕಾರಿಯಾಗಿದೆ’ ಎಂಬುದಾಗಿ ಐರ್‌ಲ್ಯಾಂಡ್ ಪ್ರಧಾನಿ ಲಿಯೋ ವರಾಡ್ಕರ್ ಈ ಮೊದಲು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News