ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಗುಂಡಿನ ಚಕಮಕಿ: ಎನ್‌ಎಸ್‌ಸಿಎನ್(ಕೆ) ಉಗ್ರರಿಗೆ ಗಂಭೀರ ಗಾಯ
Update: 2017-09-27 22:56 IST
ಹೊಸದಿಲ್ಲಿ, ಸೆ. 26: ಭಾರತ -ಮ್ಯಾನ್ಮಾರ್ ಗಡಿಯಲ್ಲಿ ಎನ್‌ಎಸ್‌ಸಿಎನ್ (ಕೆ) ಬಂಡುಕೋರ ಗುಂಪಿನೊಂದಿಗೆ ಬುಧವಾರ ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರಿಗೆ ಗಂಭೀರ ಗಾಯಗಳಾಗಿವೆ ಎಂದು ಸೇನೆ ತಿಳಿಸಿದೆ.
ಭಾರತದ ಸೇನಾ ಪಡೆಯ ಯೋಧರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಸೇನೆಯ ಯೋಧರು ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಮುಂಜಾನೆ 4.45ಕ್ಕೆ ಎನ್‌ಎಸ್‌ಸಿಎನ್ (ಕೆ)ಯ ಅನಾಮಿಕ ಉಗ್ರರು ಗುಂಡಿನ ದಾಳಿ ನಡೆಸಿದರು ಎಂದು ಸೇನೆಯ ಹೇಳಿಕೆ ತಿಳಿಸಿದೆ.
ಸೇನೆ ತ್ವರಿತವಾಗಿ ಪ್ರತಿಕ್ರಿಯಿಸಿದೆ ಹಾಗೂ ಉಗ್ರರ ಮೇಲೆ ಪ್ರತಿ ದಾಳಿ ನಡೆಸಿದೆ. ಇದರಿಂದ ಉಗ್ರರು ಅಲ್ಲಿಂದ ಪರಾರಿಯಾದರು. ಗುಂಡಿನ ಚಕಮಕಿಯಲ್ಲಿ ಉಗ್ರರು ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಭಾರತದ ಸೇನಾ ಪಡೆ ಅಂತಾರಾಷ್ಟ್ರೀಯ ಗಡಿ ರೇಖೆ ಉಲ್ಲಂಘಿಸಿಲ್ಲ. ಇದು ಸರ್ಜಿಕಲ್ ಸ್ಟ್ರೈಕ್ ಅಲ್ಲ ಎಂದು ಸೇನೆಯ ಮೂಲಗಳು ತಿಳಿಸಿವೆ.