ಕೇಂದ್ರ ಸರಕಾರಿ ವೈದ್ಯರ ನಿವೃತ್ತಿ ವಯಸ್ಸು ಏರಿಕೆ
Update: 2017-09-27 23:01 IST
ಹೊಸದಿಲ್ಲಿ, ಸೆ. 26: ಕೇಂದ್ರ ಸರಕಾರದ ವೈದ್ಯರ ನಿವೃತ್ತ ವಯಸ್ಸನ್ನು 65ಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಆದಾಗ್ಯೂ, ಕೇಂದ್ರ ಆರೋಗ್ಯ ಸೇವೆಯ ವೈದ್ಯರಿಗೆ ಇದು ಅನ್ವಯವಾಗಲಾರದು. ಪ್ರಸ್ತುತ ಕೇಂದ್ರ ಸರಕಾರದ ವೈದ್ಯರ ನಿವೃತ್ತಿ ವಯಸ್ಸು 60. ವೈದ್ಯರ ಕೊರತೆ ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ.