ಶತಕದ ಪಂದ್ಯದಲ್ಲಿ ವಾರ್ನರ್ ಸೆಂಚುರಿ

Update: 2017-09-28 14:11 GMT

ಬೆಂಗಳೂರು, ಸೆ.28: ಆಸ್ಟ್ರೇಲಿಯದ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಭಾರತ ವಿರುದ್ಧದ ನಾಲ್ಕನೆ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದರು.

100ನೆ ಏಕದಿನ ಪಂದ್ಯವನ್ನಾಡಿದ ವಾರ್ನರ್ 119 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ 124 ರನ್ ಗಳಿಸಿ ಔಟಾದರು.

ವಾರ್ನರ್ 103 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 14ನೆ ಏಕದಿನ ಶತಕ ದಾಖಲಿಸಿದರು.

2009ರಲ್ಲಿ ಹೊಬರ್ಟ್‌ನಲ್ಲಿ ಏಕದಿನ ಕ್ರಿಕೆಟ್ ಪ್ರವೇಶಿಸಿದ್ದ ವಾರ್ನರ್ 100ನೆ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ ವಿಶ್ವ ಕ್ರಿಕೆಟ್‌ನಲ್ಲಿ 8ನೆ ದಾಂಡಿಗ ಎನಿಸಿಕೊಂಡಿದ್ದಾರೆ.

ಕೇದಾರ್ ಜಾಧವ್ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಶತಕ ಪೂರ್ಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News