×
Ad

ಮತದಾರರ ಪಟ್ಟಿಯಿಂದ ವಾಜಪೇಯಿ ಹೆಸರು ರದ್ದು

Update: 2017-09-28 20:36 IST

ಲಕ್ನೊ, ಸೆ.28: ಲಕ್ನೊ ಮಹಾನಗರಪಾಲಿಕೆ ಮತದಾರರ ಪಟ್ಟಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ನಿಯಮದ ಪ್ರಕಾರ, ದಾಖಲೆಯಲ್ಲಿ ನೀಡಲಾಗಿರುವ ವಿಳಾಸದಲ್ಲಿ ವ್ಯಕ್ತಿ ಆರು ತಿಂಗಳಿಗಿಂತ ಹೆಚ್ಚಿನ ಅವಧಿಯಿಂದಲೂ ವಾಸಿಸದೆ ಇದ್ದಲ್ಲಿ ಅಂತವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

 ವಾಜಪೇಯಿ 2004ರಿಂದ ಇಲ್ಲಿ ವಾಸಿಸುತ್ತಿಲ್ಲ. ನಿಯಮದಂತೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ. ವೃದ್ದಾಪ್ಯ ಸಂಬಂಧಿ ಸಮಸ್ಯೆಗಳಿಂದ ಬಳಲಿರುವ ವಾಜಪೇಯಿ ಸುದೀರ್ಘಾವಧಿಯಿಂದ ಹೊರಗೆಲ್ಲೂ ಕಾಣಿಸಿಕೊಂಡಿಲ್ಲ. 92ರ ಹರೆಯದ ವಾಜಪೇಯಿ ಲಕ್ನೊ ಕ್ಷೇತ್ರದ ಸಂಸದರಾಗಿ ಸತತ ಐದು ವರ್ಷ ಆರಿಸಿ ಬಂದಿದ್ದು, 2004ರ ಮಹಾಚುನಾವಣೆ ಬಳಿಕ ಯಾವ ಚುನಾವಣೆಯಲ್ಲೂ ಮತದಾನ ಮಾಡಿಲ್ಲ. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಈಗ ಲಕ್ನೊ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News