×
Ad

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಥಮ ಬಾರಿಗೆ ದಸರಾ ಸಂಭ್ರಮ

Update: 2017-09-28 21:33 IST

ಮಂಗಳೂರು, ಸೆ.28: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ದಸರಾ ಆಚರಿಸಲ್ಪಟ್ಟಿದೆ.
ಮಂಗಳವಾರ ಆರಂಭಗೊಂಡ ದಸರಾ ಸಂಭ್ರಮವು ಗುರುವಾರ ಅಂತ್ಯಗೊಂಡಿದೆ.

ವಿಮಾನ ನಿಲ್ದಾಣವು ವಿದ್ಯುತ್ ಅಲಂಕಾರದಿಂದ ಕಂಗೊಳಿಸಿದ್ದು, ಸುಗಮ ಸಂಗೀತ, ಕಲಾ ಪ್ರದರ್ಶನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಮಾನ ಯಾನಿಗಳು ಮತ್ತು ಅವರನ್ನು ಬೀಳ್ಕೊಡಲು, ಬರಮಾಡಿಕೊಳ್ಳಲು ಆಗಮಿಸಿದ ಸಾರ್ವಜನಿಕರು ಕೂಡ ಜಾತಿಮತ ಭೇದವಿಲ್ಲದೆ ದಸರಾ ಆಚರಣೆ ವೀಕ್ಷಿಸಿ ಸಂಭ್ರಮಿಸಿದರು. ಆಕರ್ಷಕ ಹುಲಿ ವೇಷ, ಮ್ಯೂರಲ್ ಆರ್ಟ್ಸ್ ಪ್ರದರ್ಶನಗೊಂಡಿತು.

ಪ್ರಾಧಿಕಾರದ ಹೊಸ ನೀತಿಯ ಅನ್ವಯ ವಿಮಾನ ನಿಲ್ದಾಣದ ಪ್ರಾಧಿಕಾರದ ಉನ್ನತ ಮಟ್ಟದ ಅಧಿಕಾರಿಗಳು ಪ್ರಾದೇಶಿಕ ಹಬ್ಬ ಆಚರಿಸಲು ಆದೇಶಿಸಿದ ಮೇರೆಗೆ ಇದೇ ಮೊದಲ ಬಾರಿಗೆ ದಸರಾ ಹಬ್ಬಕ್ಕೆ ಪ್ರಾದೇಶಿಕ ಸಾಂಸ್ಕೃತಿಕ ಸ್ಪರ್ಶ ನೀಡಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News