ಸಚಿವ ರೈ ವಿರುದ್ಧದ ದೂರು ವಿಚಾರಣೆ ಅ.10ಕ್ಕೆ ಮುಂದೂಡಿಕೆ
Update: 2017-09-28 21:37 IST
ಮಂಗಳೂರು, ಸೆ.28: ಯುವಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವಹೇಳನಕಾರಿ ಪದಗಳನ್ನು ಬಳಸಿರುವುದಾಗಿ ಆರೋಪಿಸಿ ಬಿಜೆಪಿ ಅಲ್ಪಸಂಖ್ಯಾಕ ಘಟಕದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಮಂಗಳೂರು 2ನೆ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಮಂಗಳವಾರ ದಾಖಲಿಸಿದ ಖಾಸಗಿ ದೂರಿನ ವಿಚಾರಣೆಯನ್ನು ಅ.10 ಕ್ಕೆ ಮುಂದೂಡಲಾಗಿದೆ.
ಗುರುವಾರ ದೂರು ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ದೂರುದಾರರ ಮತ್ತು ಅವರ ಸಾಕ್ಷಿಗಳ ಹೇಳಿಕೆಯನ್ನು ಆಲಿಸಲು ಅ.10 ದಿನಾಂಕ ನಿಗದಿ ಪಡಿಸಿತು.