ಡಿಜಿಟಲ್ ಪಾವತಿ: ಬ್ಯಾಂಕ್‌ಗಳಿಗೆ ವಾರ್ಷಿಕ 3,800 ಕೋ.ರೂ.ನಷ್ಟ

Update: 2017-09-28 16:10 GMT

ಮುಂಬೈ,ಸೆ.28: ಡಿಜಿಟಲ್ ಪಾವತಿಗಳಿಗೆ, ಮುಖ್ಯವಾಗಿ ಪಿಒಎಸ್ ಯಂತ್ರಗಳ ಮೂಲಕ ಆನ್‌ಲೈನ್ ಕಾರ್ಡ್ ಪಾವತಿಗಳಿಗೆ ಸರಕಾರವು ಹೆಚ್ಚಿನ ಒತ್ತು ನೀಡುತ್ತಿರುವು ದರಿಂದ ಮೊದಲೇ ಬಂಡವಾಳ ಕೊರತೆಯಿಂದ ನಲುಗಿರುವ ಬ್ಯಾಂಕ್‌ಗಳು ವಾರ್ಷಿಕ 3,800 ಕೋ.ರೂ.ಗಳ ಭಾರೀ ನಷ್ಟವನ್ನು ಅನುಭವಿಸುವಂತಾಗಬಹುದು ಎಂದು ಎಸ್‌ಬಿಐ ರೀಸರ್ಚ್ ಗುರುವಾರ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ನೋಟು ಅಮಾನ್ಯದ ಬಳಿಕ ಆನ್‌ಲೈನ್ ಹಣಪಾವತಿ ಯನ್ನು ಉತ್ತೇಜಿಸಲು ಲಕ್ಷಾಂತರ ಪಿಒಎಸ್ ಯಂತ್ರಗಳನ್ನು ಸ್ಥಾಪಿಸಲು ಸರಕಾರವು ಬ್ಯಾಂಕುಗಳಿಗೆ ನಿರ್ದೇಶ ನೀಡಿತ್ತು. 2016 ಮಾರ್ಚ್‌ನಲ್ಲಿ 13.8 ಲಕ್ಷ ಇದ್ದ ಈ ಯಂತ್ರಗಳ ಸಂಖ್ಯೆ ಕಳೆದ ಜುಲೈನಲ್ಲಿ 28.4 ಲಕ್ಷಕ್ಕೆ ಏರಿದೆ. ಬ್ಯಾಂಕುಗಳು ಸರಾಸರಿ ದಿನವೊಂದಕ್ಕೆ 5,000 ಪಿಒಎಸ್‌ಗಳನ್ನು ಸ್ಥಾಪಿಸುತ್ತಿವೆ.

ಪಿಒಎಸ್‌ಗಳ ಮೂಲಕ ಕಾರ್ಡ್ ವಹಿವಾಟುಗಳಿಂದಾಗಿ ಬ್ಯಾಂಕ್‌ಗಳ ವಾರ್ಷಿಕ ನಷ್ಟ ಅಂದಾಜು 4,700 ಕೋ.ರೂ.ಗಳಷ್ಟಾಗುತ್ತಿದ್ದು, ವಹಿವಾಟುಗಳಿಂದ ಸುಮಾರು 900 ಕೋ.ರೂ.ಗಳಷ್ಟು ಮಾತ್ರ ನಿವ್ವಳ ಆದಾಯವನ್ನು ಅಂದಾಜಿಸಲಾಗಿದೆ. ಹೀಗಾಗಿ ಬ್ಯಾಂಕ್‌ಗಳ ಒಟ್ಟು ವಾರ್ಷಿಕ ನಷ್ಟ 3,800 ಕೋ.ರೂ.ಆಗಲಿದೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News