ತೋಡಿಗೆ ಬಿದ್ದು ಮಗು ಮೃತ್ಯು
Update: 2017-09-28 22:02 IST
ಕುಂದಾಪುರ, ಸೆ.28: ತೋಡಿನ ನೀರಿಗೆ ಬಿದ್ದು ಮಗುವೊಂದು ಮೃತಪಟ್ಟ ಘಟನೆ ಸೆ.27ರಂದು ಸಂಜೆ ವೇಳೆ ಕೋಣಿ ಕೆಳಕೇರಿ ಎಂಬಲ್ಲಿ ನಡೆದಿದೆ.
ಕೇಳಕೇರಿಯ ಜನಕ ಎಂಬವರ ಮೂರೂವರೆ ವರ್ಷದ ಮಗು ಸೇವಿತಾ ಮೃತಪಟ್ಟ ಮಗು. ಮನೆಯ ಹತ್ತಿರ ಆಟವಾಡುತ್ತಿದ್ದ ಮಗು ತೋಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.