ರಾಜ್ಯಮಟ್ಟದ ಪ.ಪೂ. ಬಾಲ್‌ಬ್ಯಾಡ್ಮಿಂಟನ್: ಆಳ್ವಾಸ್‌ಗೆ ಅವಳಿ ಪ್ರಶಸ್ತಿ

Update: 2017-09-28 17:01 GMT

ಮೂಡುಬಿದಿರೆ, ಸೆ. 28: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಸವಣ್ಣನವರ ಮಠದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ಬಾಲ್‌ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದ.ಕ. ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಆಳ್ವಾಸ್ ತಂಡ ಅವಳಿ ಪ್ರಶಸ್ತಿ ಗೆದ್ದುಕೊಂಡಿದೆ. ಆಳ್ವಾಸ್ 11ನೆ ಬಾರಿ ಈ ಪ್ರಶಸ್ತಿ ಜಯಿಸಿದೆ.

ಬಾಲಕರ ಫೈನಲ್ ಹೋರಾಟದಲ್ಲಿ ದ.ಕ. ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜು ತಂಡವು ದಾವಣಗೆರೆ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಎಸ್.ಎಸ್.ಎಚ್. ಜೈನ್ ಪ.ಪೂ. ಕಾಲೇಜು ತಂಡವನ್ನು 35-17, 35-12 ಗೇಮ್‌ಗಳಿಂದ ಸೋಲಿಸಿದೆ.

ಬಾಲಕಿಯರ ಫೈನಲ್‌ನಲ್ಲಿ ಆಳ್ವಾಸ್ ತಂಡವು ತುಮಕೂರು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಎಂಪ್ರೆಸ್ ಪ.ಪೂ. ಕಾಲೇಜು ತಂಡವನ್ನು 35-24, 35-20 ಅಂಕಗಳಿಂದ ಕೆಡಹಿದೆ.

ವಿಜೇತ ಆಳ್ವಾಸ್ ತಂಡವು ವಾರಂಗಲ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಅರ್ಹತೆ ಗಳಿಸಿದೆ. ವಿಜೇತ ತಂಡದ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News