ಬಿಎಚ್‌ಯು ಕ್ಯಾಂಪಸ್‌ನಲ್ಲಿ ಆಲ್ಕೋಹಾಲ್, ಡ್ರೆಸ್ ನಿರ್ಬಂಧ ಇಲ್ಲ

Update: 2017-09-29 04:55 GMT

ವಾರಣಾಸಿ, ಸೆ. 29: ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಡ್ರೆಸ್ ನಿರ್ಬಂಧ ಅಥವಾ ಆಲ್ಕೊಹಾಲ್ ನಿಷೇಧ ಇಲ್ಲ. ಕ್ಯಾಂಪಸ್ ಮೆಸ್‌ಗಳಲ್ಲಿ ಮಾಂಸಾಹಾರಕ್ಕೂ ನಿರ್ಬಂಧ ಇಲ್ಲ ಎಂದು ನೂತನ ಪ್ರಾಕ್ಟರ್ (ಶಿಸ್ತುಪಾಲನಾಧಿಕಾರಿ) ಆಗಿ ನೇಮಕಗೊಂಡಿರುವ ರೊಯೊನಾ ಸಿಂಗ್ ಪ್ರಕಟಿಸಿದ್ದಾರೆ.

ಬಿಎಚ್‌ಯು ಇತಿಹಾಸದಲ್ಲೇ ಮಹಿಳೆಯೊಬ್ಬರನ್ನು ಈ ಹುದ್ದೆಗೆ ನೇಮಕ ಮಾಡಿರುವುದು ಇದೇ ಮೊದಲು. "ನಾನು ಯುರೋಪ್‌ನಲ್ಲಿ ಹುಟ್ಟಿದವಳು. ಯೂರೋಪ್ ಹಾಗೂ ಕೆನಡಾಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ. ವಿದ್ಯಾರ್ಥಿನಿಯರಿಗೆ ಇಂಥದ್ದೇ ಉಡುಪು ಧರಿಸಬೇಕು ಎಂದು ನಿರ್ಬಂಧ ವಿಧಿಸುವುದು ನನ್ನ ಮೇಲೆ ನಾನು ನಿರ್ಬಂಧ ಹೇರಿಕೊಂಡಂತೆ. ಮುಂಜಾನೆ 6ಕ್ಕೆ ದಿನಚರಿ ಆರಂಭವಾಗಿ 10.30ಕ್ಕೆ ಕೊನೆಗೊಳ್ಳಬೇಕು. ಆದರೆ ನಿಮಗೆ ಆರಾಮದಾಯಕವಾದ ಉಡುಪು ನೀವು ಧರಿಸಲು ಸಾಧ್ಯವಿಲ್ಲ ಎಂದಾದರೆ ಅದು ನಾಚಿಕೆಗೇಡು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಸ್ಕಿಂಪಿಲಿ ಕ್ಲಾಡ್ ಎಂದು ಚುಡಾಯಿಸುವುದು ವಿಚಿತ್ರವೆನಿಸುತ್ತದೆ. ಹುಡುಗಿಯರು ತಮಗೆ ಆರಾಮದಾಯಕ ಎನಿಸುವ ಉಡುಗೆ ತೊಟ್ಟರೆ ಅವರೇಕೆ ಆಕ್ಷೇಪಿಸಬೇಕು?" ಎಂದು ಸಿಂಗ್ ಪ್ರಶ್ನಿಸಿದರು. ಬಿಎಚ್‌ಯು ವೈದ್ಯಕೀಯ ವಿಜ್ಞಾನ ಕಾಲೇಜಿನ ದೇಹಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾಗಿರುವ ರೊಯೊನಾ ಸಿಂಗ್, 1980ರ ದಶಕದಲ್ಲಿ ಒಂಬತ್ತು ವರ್ಷ ಫ್ರಾನ್ಸ್‌ನ ರಾಯನ್ ನಗರದಲ್ಲಿ ವಾಸವಿದ್ದರು.

ಕ್ಯಾಂಪಸ್‌ನಲ್ಲಿ ಮದ್ಯಪಾನದ ಬಗ್ಗೆ ಸ್ಪಷ್ಟನೆ ನಿಡಿದ ಅವರು, "ಇಲ್ಲಿರುವ ಎಲ್ಲಾ ವಿದ್ಯಾರ್ಥಿನಿಯರು 18 ವರ್ಷ ಮೀರಿದವರು. ಅವರ ಮೇಲೆ ಏಕೆ ನಿಷೇಧ ವಿಧಿಸಬೇಕು" ಎಂದು ಪ್ರಶ್ನಿಸಿದರು.

ರೊಯೊನಾ ಸಿಂಗ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News