ಮುಂಬೈ ಎಲ್ಫಿನ್ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ: 22ಸಾವು

Update: 2017-09-29 07:11 GMT

ಮುಂಬೈ, ಸೆ.29: ಇಲ್ಲಿನ ಎಲ್ಫಿನ್ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ 22 ಮಂದಿ ಮೃತಪಟ್ಟು 30ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

"ಶಾರ್ಟ್ ಸರ್ಕೂಟ್ ನಡೆದ ನಂತರ ಕಾಲ್ಸೇತುವೆ ಕುಸಿಯುತ್ತಿದೆ ಎಂದು ಯಾರೋ ಬೊಬ್ಬಿಟ್ಟ ನಂತರ ಜನರು ಭಯದಿಂದ ಓಡತೊಡಗಿದರು. ಒಬ್ಬರನ್ನೊಬ್ಬರು ತಳ್ಳಿಕೊಂಡು ಓಡುತ್ತಿದ್ದರು. ಮೆಟ್ಟಿಲುಗಳ ಮಧ್ಯೆ ಇದ್ದ ಕೆಲವರು ಕೆಳಕ್ಕೆ ಬಿದ್ದರು" ಎಂದು ಪ್ರತ್ಯಕ್ಷದರ್ಶಿಯೋರ್ವರು ಮಾಹಿತಿ ನೀಡಿದ್ದಾರೆ.

22 ಮಂದಿ ಮೃತಪಟ್ಟಿದ್ದಾರೆ ಎಂದು ಕೆಇಎಂ ಆಸ್ಪತ್ರೆ ಈಗಾಗಲೇ ಹೇಳಿದೆ. ಜನಸಂದಣಿ ಹೆಚ್ಚಾದುದರಿಂದ ಹಾಗೂ ಭಾರೀ ಮಳೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ. ರೈಲ್ವೆ ಪೊಲೀಸ್ ಫೋರ್ಸ್ ಹಾಗೂ ಸರಕಾರಿ ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News