ಕಿಡ್ನಿ ಚಿಕಿತ್ಸೆಗೆ ನೆರವಾಗಲು ಮನವಿ
Update: 2017-09-29 14:13 IST
ಮಂಗಳೂರು, ಸೆ. 29: ಸುರತ್ಕಲ್ ಸಮೀಪದ ಕಾಟಿಪಳ್ಳದ 2ನೆ ಬ್ಲಾಕ್‌ನ ಮುಡಾಯಿ ಕೋಡಿ ರಸ್ತೆಯ ನಸೀಮಾ-ಅಸ್ಗರ್ ಅಲಿ ದಂಪತಿಯ ಪುತ್ರಿ 12ರ ಹರೆಯದ ಆಯಿಷತ್ ರುಫೈದಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾಟಿಪಳ್ಳದ ಹೆಣ್ಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆಯ ಹೆತ್ತವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ.
ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ನಸೀಮಾರಿಗೆ ನಾಲ್ಕು ಹೆಣ್ಣು ಮಕ್ಕಳು, ಆರ್ಥಿಕ ದುಸ್ಥಿತಿಯ ಮಧ್ಯೆ ಮಗಳ ಅನಾರೋಗ್ಯದಿಂದ ಕುಟುಂಬ ಕಂಗೆಟ್ಟಿವೆ. ಸದ್ಯ ಈಕೆ ನಗರದ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಹೃದಯಿಗಳು ‘ನಸೀಮಾ, ಬ್ಯಾಂಕ್ ಖಾತೆ ಸಂ: 246801000002494, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸುರತ್ಕಲ್ ಶಾಖೆ, ಐಎಫ್‌ಎಸ್‌ಸಿ ಸಂ: ಐಒಬಿಎ 0002468 (ಮೊ.ಸಂ: 7204221904/9008339568)ಕ್ಕೆ ಹಣ ಜಮಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.