×
Ad

ತಾಯಿಯ ವಿಚಾರಣೆ ವೇಳೆ ಹಸಿದು ಅಳತೊಡಗಿದ ಮಗುವಿಗೆ ಎದೆಹಾಲುಣಿಸಿದ ಮಹಿಳಾ ಪೊಲೀಸ್

Update: 2017-09-29 17:44 IST

ಬೀಜಿಂಗ್, ಸೆ. 29: ತಾಯಿಯು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಸಂದರ್ಭ ಹಸಿದು ಅಳತೊಡಗಿದ ಮಗುವಿಗೆ ಮಹಿಳಾ ಪೊಲೀಸ್ ಒಬ್ಬರು ಎದೆಹಾಲುಣಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್ ಆಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

ಬೀಜಿಂಗ್‍ನ ಹಾವೊ ಲಿನಾ ಎನ್ನುವ ಮಹಿಳಾ ಅಧಿಕಾರಿ ವಿಚಾರಣಾ ಕೈದಿಯೊಬ್ಬಾಕೆಯ ಮಗು ಹಸಿದು ಅಳುತ್ತಿರುವುದನ್ನು ಗಮನಿಸಿ ಎದೆಹಾಲುಣಿಸಿದ್ದಾರೆ.  ಶಾನ್ಶಿ ಜಿನ್‍ಶಾಂಗ್ ಇಂಟರ್ ಮೀಡಿಯೇಟ್ ಪೀಪಲ್ಸ್ ಕೋರ್ಟಿನಲ್ಲಿ ಈ ಘಟನೆ ನಡೆದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಈ ಮಗುವಿನ ತಾಯಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. 

"ಮಗು ಅಳುತ್ತಿತ್ತು. ಏನು ಮಾಡಬೇಕೆಂದು ತಿಳಿಯದೆ ಎಲ್ಲರೂ ನಿಂತಿದ್ದರು. ತಾಯಿಯಾಗಿ ನಾನು ಏನು ಮಾಡಬೇಕೋ ಅದನ್ನೇ ಮಾಡಿದೆ. ನಾನು ಮಗುವಿನ ತಾಯಿ" ಎಂದು ಲಿನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News