×
Ad

ಪಣಂಬೂರು: ಸಮುದ್ರ ಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ

Update: 2017-09-29 22:40 IST

ಮಂಗಳೂರು, ಸೆ. 29: ಪಣಂಬೂರು ಬೀಚ್ ನಲ್ಲಿ ಸಮುದ್ರ ಪಾಲಾಗುತ್ತಿದ್ದ ಒಟ್ಟು ಆರು ಮಂದಿಯನ್ನು ಇಲ್ಲಿನ ಜೀವರಕ್ಷಕ ತಂಡ ರಕ್ಷಿಸಿದೆ.

ನೀರು ಪಾಲಾಗುತ್ತಿದ್ದವರನ್ನು ವಿಟ್ಲದ ಮಂಗಳಮೂಡ ನಿವಾಸಿಗಳಾದ ರೋಹಿತ್ (22), ನಿಶಾಂತ್ (23), ರಜೇಶ್ (28) ಎಂದು ಗುರುತಿಸಲಾಗಿದ್ದು, ನೀರಿನಲ್ಲಿ ಮುಳುಗುತ್ತಿದ್ದ ಇವರನ್ನು ಜೀವರಕ್ಷಕ ತಂಡ ರಕ್ಷಿಸಿದೆ. ಸಂಜೆಯ ಸುಮಾರಿಗೆ ಸಮುದ್ರಕ್ಕೆ ಇಳಿದು ನೀರು ಪಾಲಾಗುತ್ತಿದ್ದ ಬೆಂಗಳೂರು ನಿವಾಸಿ ರಮೇಶ್ (28), ಪಿಣ್ಯ ನಿವಾಸಿ ರಾಜು (27) ಮತ್ತು ಹರ್ಯಾಣ ನಿವಾಸಿ ಕರಣ್ (28) ಎಂಬವರನ್ನೂ  ಜೀವರಕ್ಷಕರ ತಂಡ ರಕ್ಷಿಸಿರುವುದಾಗಿ ಪಣಂಬೂರ್ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಸಿಇಒ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News