ಪ್ರೇಕ್ಷಕನನ್ನು ಆಸ್ಪತ್ರೆಗೆ ತಲುಪಿಸಿದ ಹಾರ್ದಿಕ್ ಪಾಂಡ್ಯನ ಸಿಕ್ಸ್

Update: 2017-09-30 11:35 GMT

ಬೆಂಗಳೂರು, ಸೆ.30: ಇಲ್ಲಿನ ಎಂ.ಚಿನ್ನಸ್ವಾಮಿ ಕೀಡಾಂಗಣದಲ್ಲಿ ಶುಕ್ರವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಾರಿಸಿದ ಸಿಕ್ಸರ್ ಪ್ರೇಕ್ಷಕನ ಮೇಲೆ ಬಿದ್ದಿದೆ.

ಪಾಂಡ್ಯ ಬಾರಿಸಿದ ಸಿಕ್ಸರ್ ಚೆಂಡು ಪಂದ್ಯವನ್ನು ವೀಕ್ಷಿಸುತ್ತಿದ್ದ ವೃತ್ತಿಯಲ್ಲಿ ಫೈನಾನ್ಸ್ ಎಕ್ಸ್‌ಕ್ಯೂಟಿವ್ ಆಗಿರುವ 24ರ ಹರೆಯದ ತೊಸಿತ್ ಅಗರ್‌ವಾಲ್ ಅವರ ಮುಖಕ್ಕೆ ಬಡಿದಿದೆ. ಗಾಯಗೊಂಡಿರುವ ಅವರು ಆಸ್ಪತ್ರೆ ಸೇರಿದ್ದಾರೆ.

 ಪಾಂಡ್ಯ ಒಟ್ಟು ಮೂರು ಸಿಕ್ಸರ್ ಸಿಡಿಸಿದ್ದರು. ಒಂದು ಸಿಕ್ಸರ್ ಅಗರ್‌ವಾಲ್ ಮುಖಕ್ಕೆ ಬಡಿದಿದೆ.

ಚೆಂಡು ಬಡಿದು ಅಗರ್‌ವಾಲ್ ಅವರ ಕೆಳತುಟಿ, ಹಲ್ಲು ಮತ್ತು ನಾಲಗೆಗೆ ಗಾಯವಾಗಿದೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ. ಪಾಂಡ್ಯ ಅವರು ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 1 ಬೌಂಡರಿ ಒಳಗೊಂಡ 41ರನ್ ಗಳಿಸಿದ್ದರು. ಭಾರತ 21 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News