×
Ad

250 ಹೆಕ್ಟರ್ ನಡುತೋಪುಗಳಲ್ಲಿ ಗೇರು ಸಸಿಗಳ ನಾಟಿ: ಬಿ.ಎಚ್. ಖಾದರ್

Update: 2017-09-30 17:51 IST

ಬಂಟ್ವಾಳ, ಸೆ. 30: ಗೇರು ನಿಗಮದ ವ್ಯಾಪ್ತಿಯ ವಿವಿಧ ತಾಲೂಕಿನಲ್ಲಿರುವ ಸುಮಾರು 250 ಹೆಕ್ಟರ್ ನಡುತೋಪುಗಳಲ್ಲಿ ಉತ್ತಮ ತಳಿಯ ಹೆಚ್ಚು ಇಳುವರಿ ನೀಡುವ ಗೇರು ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ನಿಗಮದ ವತಿಯಿಂದ ಮಹಾರಾಷ್ಟ್ರದ ವೆಂಗುರ್ಲಾ- 4 ತಳಿಯ ಕಸಿ ಗೇರು ಸಸಿಗಳನ್ನು ತರಿಸಲಾಗಿದೆ. ನಿಗಮದ ಪುತ್ತೂರು, ಕುಂದಾಪುರ, ಕುಮುಟಾ ಹಾಗೂ ಮೂಡಬಿದಿರೆ ವ್ಯಾಪ್ತಿಯ 250ಹೆಕ್ಟರ್ ನಡುತೋಪುಗಳಲ್ಲಿ ನಾಟಿ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಫಸಲು ವೃದ್ಧಿಯಾಗಿ ನಿಗಮದ ಅದಾಯವು ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ವೆಂಗುರ್ಲಾ- 4ತಳಿಯ ಸುಮಾರು 50 ಸಾವಿರಗೇರು ಸಸಿಗಳನ್ನು ರೈತರು, ಶಾಲಾ-ಕಾಲೇಜು, ಸಂಘಸಂಸ್ಥೆಗಳು, ಗ್ರಾಮಪಂಚಾಯತ್‌ಗಳಿಗೆ ಉಚಿತವಾಗಿ ವಿತರಿಸುವ ಮೂಲಕ ಗೇರು ಕ್ರಷಿಗೆ ಉತ್ತೇಜನ ನೀಡಲಾಗುತ್ತಿದೆಯಲ್ಲದೆ, ಪ್ರತಿ ಮನೆಗಳ ತಮ್ಮ ಖಾಲಿ ಜಾಗದಲ್ಲಿ ಗೇರು ಕೃಷಿಯನ್ನು ಬೆಳೆಸುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News