ಉಡುಪಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಉದ್ಘಾಟನೆ
ಉಡುಪಿ, ಸೆ.30: ಉಡುಪಿ ಸಂಸ್ಕೃತ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳ ಲಾದ ಉಡುಪಿ ಸಾರ್ವಜನಿಕ ಶಾರದಾ ಮಹೋತ್ಸವದ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯನ್ನು ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಇತ್ತೀಚೆಗೆ ಉದ್ಘಾಟಿಸಿದರು.
ಉದ್ಯಮಿ ಮನೋಹರ್ ಶೆಟ್ಟಿ, ಪಲಿಮಾರು ಮಠದ ಕಾರ್ಯಾಧ್ಯಕ್ಷ ರಾಮ ಚಂದ್ರ ಆಚಾರ್ಯ, ಮಲ್ಪೆ ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ, ಮಲ್ಪೆ ಶಿವಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷ ರವಿ ಸಾಲ್ಯಾನ್, ಮಲ್ಪೆ ಬಾಲಕರ ರಾಮ ಭಜನಾ ಮಂದಿರದ ಶಿವ ಸುವರ್ಣ, ಮಲ್ಪೆ ಹನುಮಾನ್ ವಿಠೋಬಾ ಭಜನಾ ಮಂದಿರದ ಶೇಖರ್ ಪುತ್ರನ್, ಕಡಿಯಾಳಿ ಮಾತೃಮಂಡಳಿ ಅಧ್ಯಕ್ಷೆ ಸುಪ್ರದಾ ಆಚಾರ್ಯ ಉಪಸ್ಥಿತರಿದ್ದರು.
ಭಜನಾ ತೀರ್ಪುಗಾರರಾಗಿ ಸುಧೀರ್‌ರಾವ್ ಕೊಡವೂರು, ಕೃಷ್ಣ ಕಾರಂತ್ ಉಡುಪಿ, ವೆಂಕಟೇಶ ರಾವ್ ಸಹಕರಿಸಿದರು. ಸ್ಪರ್ಧೆಯಲ್ಲಿ ಸುಮಾರು 11 ಭಜನಾ ತಂಡಗಳು ಭಾಗವಹಿಸಿದ್ದವು. ಉಡುಪಿ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಲಕ್ಷ್ಮೀನಾರಾಯಣ ರಾವ್ ವಂದಿಸಿದರು.