ಮಹಾಕಾಳಿಪಡ್ಪು ದೇವಸ್ಥಾನದಿಂದ ಸಂಸದರಿಗೆ ಮನವಿ
Update: 2017-09-30 20:19 IST
ಮಂಗಳೂರು, ಸೆ. 30: ಜೆಪ್ಪು ಮಹಾಕಾಳಿಪಡ್ಪು ಶ್ರೀ ಆದಿಮಹೇಶ್ವರಿ ದೇವಸ್ಥಾನದ ಆವರಣಗೋಡೆ ಕಳೆದ ಎರಡು ತಿಂಗಳಿಂದ ಕುಸಿದು ಬಿದ್ದಿದೆ. ಈ ತಡೆಗೋಡೆಯನ್ನು ಶೀಘ್ರ ನಿರ್ಮಾಣ ಮಾಡಿಕೊಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ದ.ಕ. ಜಿಲ್ಲಾ ಸ್ಲಂ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತಕ್ ಪೂಜಾರಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಆದಿಮಹೇಶ್ವರಿ ದೇವಸ್ಥಾನದ ಅಧ್ಯಕ್ಷ ದಿನೇಶ್ ಕರ್ಕೇರ,ಆಡಳಿತ ಮಂಡಳಿಯ ಕಿಶೋರ್ ಕುಮಾರ್, ದೇವದಾಸ್ ಶೆಟ್ಟಿ, ಮಾಜಿ ಎಂಎಲ್‌ಸಿ ಮೋನಪ್ಪ ಭಂಡಾರಿ, ದಕ್ಷಿಣ ಮಂಡಳದ ಅಧ್ಯಕ್ಷ ವೇದವ್ಯಾಸ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.