×
Ad

ಪಡಿತರ ಪಡೆಯಲು ಪರದಾಟ: ಕ್ರಮಕ್ಕೆ ಆಗ್ರಹ

Update: 2017-09-30 20:21 IST

ಮಂಗಳೂರು, ಸೆ. 30: ಸರಕಾರದ ಅವೈಜ್ಞಾನಿಕ ನೀತಿಯಿಂದಾಗಿ ಪಡಿತರ ಚೀಟಿದಾರರು ತಮ್ಮ ಪಡಿತರ ಪಡೆಯಲು ಪರದಾಡುತ್ತಿದ್ದು, ಕೂಡಲೇ ವ್ಯವಸ್ಥೆಯನ್ನು ಸರಿಪಡಿಸುವಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಜಿಲ್ಲೆ ಸರಕಾರವನ್ನು ಆಗ್ರಹಿಸಿದೆ.

ಪಡಿತರ ಸಾಮಗ್ರಿಗಳನ್ನು ಪಡೆಯಲು ಮಹಿಳೆಯರು, ವೃದ್ಧರು, ಮಕ್ಕಳು ಸರದಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಸರದಿ ಮುಗಿಯುವಾಗ ಹೆಬ್ಬೆಟ್ಟು ತನ್ನಿ ಎಂದು ಹೇಳುತ್ತಾರೆ. ಹೆಬ್ಬೆಟ್ಟಿಗಾಗಿ ಮತ್ತೆ ಸರದಿ ಸಾಲಲ್ಲಿ ನಿಲ್ಲಬೇಕು. ನಿಂತರೂ ಸರ್ವರ್ ಸರಿ ಇಲ್ಲ ಎಂಬ ಉತ್ತರ ಬರುತ್ತಿದೆ. ಸರಕಾರ ಅವೈಜ್ಞಾನಿಕ ನೀತಿಯಿಂದಾಗಿ ಇಂದು ಪಡಿತರ ಆಹಾರ ಸಾಮಗ್ರಿಗಳನ್ನು ಪಡೆಯಲು ಪಡಿತರ ಚೀಟಿದಾರರು ಸರದಿ ಸಾಲಲ್ಲಿ ನಿಂತು ಕೊನೆಗೆ ಪಡಿತರ ಇಲ್ಲದೆ ವಾಪಾಸು ಹೋಗಬೇಕಾಗ ಪರಿಸ್ಥಿತಿ ಇದೆ. ಆದ್ದರಿಂದ ವ್ಯವಸ್ಥೆಯನ್ನು ಸರಿಪಡಿಸಿ ಸರದಿಯಲ್ಲಿ ನಿಂತವರಿಗೆ ಶೀಘ್ರದಲ್ಲೇ ಪಡಿತರ ಸಿಗುವಂತೆ ಅವಕಾಶ ಮಾಡಿಕೊಡಬೇಕೆಂದು ಲೀಗ್‌ನ ಮಾಜಿ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯೀಲ್ ಪ್ರಕಟನೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News