ಉಡುಪಿ: ಕದಿರು ಕಟ್ಟುವ ಕಾರ್ಯಕ್ರಮ
Update: 2017-09-30 21:10 IST
ಉಡುಪಿ, ಸೆ.30: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ವಿಜಯದಶಮಿಯ ಪರ್ವಕಾಲದಲ್ಲಿ ಮಠದ ಪುರೋಹಿತ ಗೋಪಾಲಕೃಷ್ಣ ಆಚಾರ್ಯರ ನೇತೃತ್ವ ದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಕದಿರು ಕಟ್ಟುವ ಕಾರ್ಯಕ್ರಮ ನಡೆಯಿತು.
ಸೋದೆ ಮಠದಿಂದ ಚಿನ್ನದ ಪಲ್ಲಕಿಯಲ್ಲಿ ಮೆರವಣಿಗೆ ಹೊರಟು ಕೃಷ್ಣಮಠಕ್ಕೆ ಗರ್ಭಗುಡಿಯ ಮೂಡು ಬಾಗಿಲಿನಿಂದ ಒಳ ಪ್ರವೇಶಿಸಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಪೂಜೆ ಮಾಡಲಾಯಿತು. ನಂತರ ಮಠದ ದಿವಾನ ರಘುರಾಮ ಆಚಾರ್ಯರ ಉಪಸ್ಥಿತಿ ಯಲ್ಲಿ ಬಡಗು ಮಳಿಗೆಯಲ್ಲಿ ಭಕ್ತಾದಿಗಳಿಗೆ ಕದಿರು ವಿತರಿಸಲಾಯಿತು.