×
Ad

ಬೋಟು ಅವಘಡ: ಓರ್ವ ಮೃತ್ಯು, ನಾಲ್ವರ ರಕ್ಷಣೆ

Update: 2017-09-30 22:02 IST

ಮಲ್ಪೆ, ಸೆ.30: ಹವಾಮಾನ ವೈಪರಿತ್ಯದಿಂದ ಬೋಟೊಂದು ಗಂಗೊಳ್ಳಿಯ ಸಮೀಪದ ಸಮುದ್ರದಲ್ಲಿ ಬಂಡೆಕಲ್ಲಿಗೆ ಢಿಕ್ಕಿ ಹೊಡೆದ ಅವಘಡದಲ್ಲಿ ಮೀನು ಗಾರರೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಸಾಲಿಗ್ರಾಮ ಪಾರಂಪಳ್ಳಿ ಪಡುಕೆರೆಯ ಶಂಕರ್ ಕುಂದರ್ ಎಂಬವರ ಮಗ ಶರತ್(21) ಎಂದು ಗುರುತಿಸಲಾಗಿದೆ. ಶ್ರೀ ನಾರಾಯಣ (ಯೋಗಿ) ಎಂಬ ಹೆಸರಿನ ಬೋಟು ಸೆ.27ರಂದು ರಾತ್ರಿ ಮಲ್ಪೆಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಸೆ.28ರಂದು ಮೀನುಗಾರಿಕೆ ಮುಗಿಸಿ ವಾಪಾಸ್ಸು ಮಲ್ಪೆಗೆ ಬರುವಾಗ ಹವಾಮಾನ ವೈಪರಿತ್ಯದಿಂದ ಬೋಟು ಕಲ್ಲು ದಿಬ್ಬಕ್ಕೆ ಸಿಲುಕಿ ಸಂಪೂರ್ಣ ಮುಳುಗಿತು.

ಬೋಟಿನಲ್ಲಿರುವ 5 ಜನರ ಪೈಕಿ ಶರತ್ ಎಂಬವರು ನೀರಿನಲ್ಲಿ ಮುಳುಗಿ ನಾಪತ್ತೆಯಾದರು. ಅಲ್ಲೆ ಸಮೀಪ ಇದ್ದ ಸುರೇಶ್ ಮೆಂಡನ್ ಎಂಬವರ ಬೋಟಿನಲ್ಲಿದ್ದವರು 4 ಜನರನ್ನು ರಕ್ಷಿಸಿದರು. ಇದರಲ್ಲಿ ರಾಜು ಕುಂದಾಪುರ ಗಾಯಗೊಂಡು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಪತ್ತೆಯಾದ ಶರತ್ ಎಂಬವರ ಮೃತದೇಹವು ಇಂದು ಮಧ್ಯಾಹ್ನ ವೇಳೆ ಕೋಡಿ ಕನ್ಯಾನ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News