×
Ad

ಮೂಲಸೌಕರ್ಯ ಅಭಿವೃದ್ಧಿಯಾಗದೆ ಬುಲೆಟ್ ಟ್ರೈನ್‌ಗೆ ಅವಕಾಶ ನೀಡೆವು: ರಾಜ್ ಠಾಕ್ರೆ

Update: 2017-09-30 22:29 IST

ಮುಂಬೈ, ಸೆ.30: ಎಲ್ಫಿನ್‌ಸ್ಟೋನ್ ರೈಲುನಿಲ್ದಾಣದ ಮೇಲ್ಸೇತುವೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ 23 ಮಂದಿ ಬಲಿಯಾದ ಘಟನೆಯ ಬಗ್ಗೆ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ತೀವ್ರ ತರಾಟೆಗೆತ್ತಿಕೊಂಡಿರುವ ‘ಮಹಾರಾಷ್ಟ್ರ ನವನಿರ್ಮಾಣ್ ಸೇನೆ’ಯ ಅಧ್ಯಕ್ಷ ರಾಜ್‌ಠಾಕ್ರೆ ಮೂಲಸೌಕರ್ಯ ಅಭಿವೃದ್ಧಿಯಾಗದೆ ಯೋಜನೆಗೆ ಒಂದು ಇಟ್ಟಿಗೆ ಇಡಲೂ ಬಿಡುವುದಿಲ್ಲ. ಅವರು ಬಲ ಪ್ರಯೋಗಿಸಿದರೆ ನಾವು ಕೂಡಾ ಪ್ರತ್ಯುತ್ತರ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಮುಂಬೈ ರೈಲುಮಾರ್ಗ ಹಾಗೂ ರೈಲ್ವೇ ಮೇಲ್ಸೇತುವೆಗಳಲ್ಲಿರುವ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಿ. ನರೇಂದ್ರ ಮೋದಿ ಇಚ್ಚಿಸುವುದಾದರೆ ಬುಲೆಟ್ ಟ್ರೈನನ್ನು ಗುಜರಾತ್‌ನಲ್ಲೇ ನಿರ್ಮಿಸಿಕೊಳ್ಳಲಿ ಎಂದಿರುವ ಅವರು, ಮೊದಲು ರೈಲ್ವೇ ಸ್ಟೇಷನ್‌ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೊಳಿಸಿ, ಆ ಮೇಲೆ ಬುಲೆಟ್ ಟ್ರೈನ್ ಬಗ್ಗೆ ಚಿಂತಿಸಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News