ಯುವತಿಗೆ ವಂಚನೆ: ಆರೋಪಿ ಸೆರೆ
Update: 2017-10-01 19:56 IST
ಪುತ್ತೂರು, ಅ.1: ದಲಿತ ಕುಟುಂಬಕ್ಕೆ ಸೇರಿದ ಯುವತಿಯೋರ್ವಳನ್ನು ನಂಬಿಸಿ, ವಂಚನೆ ಮಾಡಿ ಆಕೆ ಗರ್ಭವತಿಯಾಗಲು ಕಾರಣವಾದ ಆರೋಪದಲ್ಲಿ ಯುವಕನೊಬ್ಬನನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಟನೋಪ್ಪಿನಡ್ಕ ನಿವಾಸಿ ಅಬ್ದುಲ್ ಅಮೀರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಅಮೀರ್ ಕೂಲಿ ಕೆಲಸ ಮಾಡುತ್ತಿದ್ದು, ಕೆಲಸದ ಸ್ಥಳದಲ್ಲಿ ಯುವತಿಯ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದ್ದು, ಬಳಿಕ ಅವರಿಬ್ಬರೂ ಪರಸ್ಪರ ಸಂಬಂಧ ಇರಿಸಿಕೊಂಡಿದ್ದು, ಇದೀಗ ಯುವತಿ ಗರ್ಭವತಿ ಎಂದು ತಿಳಿದುಬಂದಿದೆ.
ಆರೋಪಿ ವಿರುದ್ಧ ಯುವತಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.