ಪಾಣಾಜೆ: ವಿವಿಧ ಕಾಮಗಾರಿಗಳಿಗೆ ಶಾಸಕಿ ಶಿಲಾನ್ಯಾಸ
ಪುತ್ತೂರು, ಅ. 1: ಪಾಣಾಜೆ ಗ್ರಾಮದ ವಿವಿಧ ಭಾಗಗಳಿಗೆ ಶಾಸಕಿ ಶಕುಂತಲಾ ಟಿ.ಶೆಟ್ಟಿ ಭೇಟಿ ನೀಡಿ ಹಲವು ಕಾಮಗಾರಿಗಳಿಗೆ ಮತ್ತು ರಸ್ತೆ ಕಾಂಕ್ರಿಟೀಕರಣಕ್ಕೆ ಚಾಲನೆ ನೀಡಿದರು.
ಗ್ರಾಮದ ಪಿಲಾವೂರು, ನೀರಮೂಲೆ, ಸೂರಂಬೈಲು, ಭರಣ್ಯ, ಸುಡ್ಕುಳಿ, ಆರ್ಲಪದವು ಶಾಲಾ ಬಳಿ, ನಡುಕಟ್ಟ, ಬೇರಿಕೆ, ಕೀಲಂಪಾಡಿ, ಕಲ್ಲಪದವು, ಬೊಳ್ಳಿಂಬಳ, ಗುರಿಕೇಲು, ಅಂಗಡಿಮಜಲು ಮೊದಲಾದ ಕಡೆ ಭೇಟಿ ನೀಡಿ ಅಲ್ಲಲ್ಲಿ ರಸ್ತೆ ಕಾಂಕ್ರೀಟಿಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೆ ಕೆದಂಬಾಡಿ ಭರಣ್ಯ ನಡುಕಟ್ಟ ಕೊಳವೆ ಬಾವಿ ಪೈಪ್ ಲೈನ್ ಉದ್ಘಾಟನೆ ಮತ್ತು ನೀರಿನ ಟ್ಯಾಂಕ್ ರಚನೆಗೆ ಶಂಕುಸ್ಥಾಪನೆ ಮಾಡಿ ಶುಭ ಹಾರೈಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹಾಜಿ ಬಡಗನ್ನೂರು, ಅಮಲ ರಾಮಚಂದ್ರ, ಕೆಡಿಪಿ ಸದಸ್ಯ ಕೃಷ್ಣ ಪ್ರಸಾದ ಆಳ್ವ, ಪುಷ್ಪರಾಜ್ ಶೆಟ್ಟಿ ಕೋಟೆ, ಯತೀಶ್ ರೈ ಪಡ್ಯಂಬೆಟ್ಟು, ಶಿವಾನಂದ ಮಣಿಯಾಣಿ ನಡುಕಟ್ಟ, ರೋಶನ್ ರೈ ಬನ್ನೂರು, ನಾಗರಾಜ್ ಘಾಟೆ, ಚಂದ್ರಶೇಖರ ರೈ , ಜಯರಾಮ ಭಟ್ ಘಾಟೆ, ಈಶ್ವರ ಭಟ್ ಕಡಂದೇಲು, ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ರೈ ಕೆದಂಬಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ಮೊಹನ ರೈ ಕೆದಂಬಾಡಿ, ಮೈಮುನಾತುಲ್ ಮೆಹ್ರಾ, ಎ.ಕೆ.ಮಹಮ್ಮದ್ ಹಾಜಿ, ಮಾಜಿ ಗ್ರಾ.ಪಂ.ಸದಸ್ಯರಾದ ಉಮ್ಮರ್ ಜನಪ್ರಿಯ, ಮಾಧವ ಮಣಿಯಾಣಿ, ಹಾಜಿ ಎಸ್.ಅಬೂಬಕ್ಕರ್ ಆರ್ಲಪದವು, ರಫೀಕ್ ಕಂಚಿಲ್ಕುಂಜ, ಜಯರಾಮ ಆಳ್ವ ಸೂರಂಬೈಲು, ಮಹಾಬಲೇಶ್ವರ ಭಟ್ ಗಿಳಿಯಾಲು, ಸದಾಶಿವ ರೈ ಸೂರಂಬೈಲು, ಅಬ್ದುಲ್ ರಹಿಮಾನ್ ಹಾಜಿ, ಕೆ.ಎ.ಅಲಿ, ನಾರಾಯಣ ನಾಯಕ್ ಅಪಿನಿಮೂಲೆ, ಶ್ರೀಮತಿ ಜಯಶ್ರೀ, ಮಂಜಪ್ಪ ಪೂಜಾರಿ, ಕೊರಗಪ್ಪ ಪೂಜಾರಿ, ಪ್ರವೀಣ ರೈ ಸೂರಂಬೈಲು, ಚನಿಯ ನಾಯ್ಕ, ನಾರಾಯಣ ನಾಯ್ಕ, ಮೋಹನ ನಾಯ್ಕ, ಅಬ್ದುಲ್ ಹಾಜಿ ಕಡಮಾಜೆ , ಮಹಮ್ಮದ್ ಕುಂಇ ಕಂಚಿಲ್ಕುಂಜ, ಅನಂತರಾಮ ರೈ ಕೆದಂಬಾಡಿ, ಹರಿಪ್ರಸಾದ್ ಕೊಂದಲಡ್ಕ, ರಾಮ ನಾಯ್ಕ ಕೋಟೆ, ಮಂಜುನಾಥ ನಾಯ್ಕ ಕೊಂದಲಡ್ಕ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗ್ರಾಮದ ಅಲ್ಲಲ್ಲಿ ಶಾಸಕಿಯನ್ನು ಪಕ್ಷದ ಮುಖಂಡರು ಸ್ವಾಗತಿಸಿದರು. ಗ್ರಾಮದ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕಿ ಸಮಾಲೋಚನೆ ನಡೆಸಿದರು. ವಿವಿಧ ಬೇಡಿಕೆಗಳನ್ನು ಸ್ವೀಕರಿಸಿದ ಶಾಸಕಿ ಸ್ಪಂದಿಸುವ ಭರವಸೆಯನ್ನು ನೀಡಿದರು.