ಜಾವೆಲಿನ್ ಥ್ರೋನಲ್ಲಿ ಚಿನ್ನ ಪಡೆದ ಶಾಲಿನಿ ರಾಜೇಶ್ ಶೆಟ್ಟಿ
Update: 2017-10-01 20:22 IST
ಉಡುಪಿ, ಅ. 1: ಚೀನಾದ ರುಗಾವ್‌ನಲ್ಲಿ ಸೆ.24 ರಿಂದ 28 ರವರೆಗೆ ನಡೆದ 20ನೆ ಏಷ್ಯಾ ಮಾಸ್ಟರ್ಸ್ ಅಥ್ಲೇಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಉಡುಪಿಯ ಶಾಲಿನಿ ರಾಜೇಶ್ ಶೆಟ್ಟಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ, ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಇವರು ಪ್ರಸ್ತುತ ಉಡುಪಿಯಲ್ಲಿ ಅಥ್ಲೆಟಿಕ್ ಕ್ರೀಡಾ ತರಬೇತುದಾರರಾಗಿ ಕಾರ್ಯನಿರ್ವಹಿಸುತಿದ್ದಾರೆ.