×
Ad

ಗಾಂಧೀಜಿ ಜೊತೆ ಪಾದಯಾತ್ರೆ ಮಾಡಿದ್ದ ಇಬ್ರಾಹಿಂ ಬೊಳ್ಳಾಡಿ ಅವರಿಗೆ ಎಂ.ಫ್ರೆಂಡ್ಸ್ ಸನ್ಮಾನ

Update: 2017-10-01 20:47 IST

ಪುತ್ತೂರು, ಅ.1: ಮಹಾತ್ಮ ಗಾಂಧೀಜಿ ಅವರೊಂದಿಗೆ 1934 ಫೆಬ್ರವರಿಯಲ್ಲಿ ಒಂದು ವಾರ ಕಾಲ 'ಹರಿಜನ್ ಯಾತ್ರೆ'ಯಲ್ಲಿ ಪಾಲ್ಗೊಂಡು ಗಾಂಧೀಜಿ ಜೊತೆ ಮಡಿಕೇರಿಯಿಂದ ಪುತ್ತೂರು ತನಕ ಪಾದಯಾತ್ರೆ ಮಾಡಿರುವ 95ರ ಹರೆಯದ  ಪುತ್ತೂರು ಕುಂಬ್ರ ಸಮೀಪದ ಬೊಳ್ಳಾಡಿ ಇಬ್ರಾಹಿಂ ಅವರನ್ನು ಎಂ.ಫ್ರೆಂಡ್ಸ್ ಮಂಗಳೂರು ತಂಡ ರವಿವಾರ ಕುಂಬ್ರದ ಬೊಳ್ಳಾಡಿಯ ಅವರ ಪುತ್ರನ ನಿವಾಸದಲ್ಲಿ ಭೇಟಿ ಮಾಡಿತು.

ಗಾಂಧೀಜಿ ಜೊತೆಗೆ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಇಬ್ರಾಹಿಂ ಅವರೊಂದಿಗೆ ಒಂದು ತಾಸುಗಳ ಕಾಲ ಸಮಯ ಕಳೆದ ಎಂ.ಫ್ರೆಂಡ್ಸ್ ತಂಡ ಗಾಂಧೀಜಿ ವಿಚಾರ ಧಾರೆಗಳ ಬಗ್ಗೆ ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ಇಬ್ರಾಹಿಂ ಬೊಳ್ಳಾಡಿ ಅವರನ್ನು ಗಾಂಧಿ ಜಯಂತಿಯ ಸ್ಮರಣಾರ್ಥ ಶಾಲು ಹೊದಿಸಿ ಸ್ಮರಣಿಕೆ ಹಾಗೂ ಗೌರವಧನ ನೀಡಿ ಸನ್ಮಾನಿಸಲಾ ಯಿತು. ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಕಾರ್ಯದರ್ಶಿ ರಶೀದ್ ವಿಟ್ಲ, ಎನ್ನಾರೈ ಸದಸ್ಯ  ಹನೀಫ್ ಪುತ್ತೂರು ಅಬುದಾಭಿ, ಕಾನೂನು ಸಲಹೆಗಾರ ಅಬೂಬಕರ್ ನೋಟರಿ ವಿಟ್ಲ, ಟ್ರಸ್ಟಿ ಕೆ.ಪಿ.ಸಾದಿಕ್ ಆಕರ್ಷಣ್ ಕುಂಬ್ರ, ಇಬ್ರಾಹಿಂ ಬೊಳ್ಳಾಡಿ ಅವರ ಪುತ್ರ ಅಬ್ಬಾಸ್ ಅವರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News