ಅ. 3ರಂದು ಬ್ಯಾರಿ ಭಾಷಾ ದಿನಾಚರಣೆ
ಮಂಗಳೂರು, ಅ. 2: ಬ್ಯಾರಿ ಭಾಷಾಭಿಮಾನಿಗಳ ಬಳಗ ಮಂಗಳೂರು ವತಿಯಿಂದ ಅ. 3ರಂದು ಪೂರ್ವಾಹ್ನ 11:30ಕ್ಕೆ ನಗರದ ವುಡ್‌ಲ್ಯಾಂಡ್ ಸಭಾಂಗಣದಲ್ಲಿ ಬ್ಯಾರಿ ಭಾಷಾ ದಿನಾಚರಣೆ ಆಯೋಜಿಸಲಾಗಿದೆ.
ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ.ಮುಹಮ್ಮದ್ ಅಲಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಬ್ಯಾರಿ ಭಾಷಾಭಿಮಾನಿಗಳ ಬಳಗದ ಸಂಚಾಲಕ ಜೆ. ಹುಸೈನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ಬಿ.ಅಬೂಬಕರ್, ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್‌ನ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪಾಡಿ, ದ.ಕ. ಜಿಲ್ಲಾ ಕೆಡಿಪಿ ಸದಸ್ಯ ಪದ್ಮನಾಭ ನರಿಂಗಾನ, ಕೋಟೆಕಾರ್ ಪಂಚಾಯತ್ ಸದಸ್ಯ ಹಮೀದ್ ಮಾಡೂರು, ಕ್ಯಾಪ್‌ಮ್ಯಾನ್ ಮೀಡಿಯಾದ ಪ್ರಮುಖ ಎಂ.ಜಿ.ರಹೀಂ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ರಾಜ್ಯ ಸರಕಾರವು ಬ್ಯಾರಿ ಭಾಷೆಗೆ ಸರಕಾರಿ ಮಣ್ಣನೆ ನೀಡಿ, 2007ರ ಅ.3ರಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸ್ಥಾಪನೆಯನ್ನು ಗಜೆಟ್‌ನಲ್ಲಿ ಪ್ರಕಟಿಸಿದೆ. ಆ ಪ್ರಯುಕ್ತ 2013ರಿಂದ ಪ್ರತೀ ವರ್ಷ ಅ. 3ನ್ನು ಬ್ಯಾರಿ ಭಾಷಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.