×
Ad

ಭಾರತ ಸೇವಾದಳದಿಂದ ಗಾಂಧಿ ಜಯಂತಿ

Update: 2017-10-02 20:12 IST

ಮಂಗಳೂರು, ಅ. 2: ಭಾರತ ಸೇವಾದಳದ ವತಿಯಿಂದ ಸೋಮವಾರ ನಗರದ ಪುರಭವನದ ಮುಂಭಾಗದ ಗಾಂಧಿಪಾರ್ಕ್‌ನಲ್ಲಿ ಗಾಂಧಿ ಜಯಂತಿಯನ್ನು ಅಚರಿಸಲಾಯಿತು.

ಶಾಸಕ ಜೆ.ಆರ್.ಲೋಬೊ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜ್ಯೋತಿ ಟ್ರೈನಿಂಗ್ ಸ್ಕೂಲ್‌ನಲ್ಲಿ ಧ್ವಜಾರೋಹಣ ನಡೆದ ಬಳಿಕ ಸೇವಾದಳದ ಮಕ್ಕಳಿಂದ ನಗರದ ಜ್ಯೋತಿ ವೃತ್ತದಿಂದ ಪುರಭವನದವರೆಗೆ ಪ್ರಭಾತ ಫೇರಿ ಮೆರವಣಿಗೆ ನಡೆಯಿತು.

ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯ ನಿವೃತ್ತ ಪೌರಕಾರ್ಮಿಕ ರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಸೇವಾದಳದ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಜಿಲ್ಲಾ ಸಂಘಟಕ ಟಿ. ಎಸ್. ಮಂಜೇಗೌಡ, ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್, ಟಿ.ಕೆ. ಸುಧೀರ್, ಪ್ರಾನ್ಸಿಸ್ ವಿ.ವಿ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News