ಮಂಗಳೂರು: ವಿಕಾಸ್ ಕಾಲೇಜಿನಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ
ಮಂಗಳೂರು, ಅ. 2: ನಗರದ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಸಂಚಾಲಕ ಡಾ. ಡಿ. ಶ್ರೀಪತಿ ರಾವ್ ಮಾತನಾಡಿ, ಗಾಂಧಿ ಹಾಗೂ ಶಾಸ್ತ್ರಿಯವರ ತತ್ವಗಳು ಅನುಕರಣೀಯ. ಸಮಯ ಪಾಲನೆ, ಅಹಿಂಸೆ, ಶಾಂತಿ ಮೊದಲಾದ ಗುಣಗಳನ್ನು ನಾವು ಅಳವಡಿಸಿಕೊಂಡಾಗ ಈ ಆಚರಣೆಗೆ ಅರ್ಥ ಬರುತ್ತದೆ. ಅವರ ಚಿಂತನೆಯನ್ನು ಸಾಕಾರಗೊಳಿಸುವುದು ನಮ್ಮೆಲ್ಲರ ಹೊಣೆ ಎಂದರು.
ಪ್ರಾಂಶುಪಾಲ ಪ್ರೊಫೆಸರ್ ಟಿ. ರಾಜಾರಾಮ್ ರಾವ್ ಅವರು ಮಾತನಾಡಿ, ಗಾಂಧೀಜಿಯವರು ಅಳವಡಿಸಿಕೊಂಡ ಜೀವನ ಮೌಲ್ಯ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನದ ಕುರಿತು ವಿವರಿಸಿದರು. ಅವರು ದೇಶಕ್ಕೆ ನೀಡಿದ ಸೇವೆ ಅಸ್ಮರಣೀಯ. ದೇಶವೇ ಗುರುತಿಸುವ ಒಳ್ಳೆಯ ರಾಜಕಾರಣಿ ಎಂದರು.
ವಿಕಾಸ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳಾದ ಜೆ.ಕೊರಗಪ್ಪ, ಸೂರಜ್ ಕಲ್ಯ, ವಿಕಾಸ್ ಎಜ್ಯೂ ಸೊಲ್ಯುಷನ್‌ನ ನಿರ್ದೇಶಕ ಡಾ. ಅನಂತ್‌ಪ್ರಭು ಜಿ., ಪ್ರಾಂಶುಪಾಲ ಟಿ. ರಾಜಾರಾಮ್ ರಾವ್, ವಿಕಾಸ್ ವಿದ್ಯಾಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥ ಸಾರಥಿ ಜೆ.ಪಾಲೆಮಾರ್, ಆಡಳಿತಾಧಿಕಾರಿ ವಿದ್ಯಾ ಕಾಮತ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಅಜಿತ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಸಾಯನಶಾಸ್ತ್ರ ಉಪನ್ಯಾಸಕ ಅಜಯ್ ಕರ್ಕೇರ ವಂದಿಸಿದರು.